ನನಗಾಗ 23 ವರ್ಷ ವಯಸ್ಸು. ಕಾಟನ್ಪೇಟೆಯ ಎಬಿವಿಪಿ ಆಫೀಸಿನಲ್ಲಿ ವಾಸ. ವಿದ್ಯಾರ್ಥಿ ಪಥ ಮ್ಯಾಗಜಿನ್ ನೋಡಿಕೊಳ್ಳುತ್ತಲೇ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸ. ಆಗ ನಾನು ಮತ್ತು ಉತ್ಥಾನದ (ಈಗಲೂ ಅಲ್ಲಿ ಇದ್ದಾರೆ) ಶ್ರೀ ಕೇಶವ ಭಟ್ ಕಾಕುಂಜೆ ಐಡಿಯಾ ಮಾಡಿ ಶುರು ಮಾಡಿದ್ದು ಪೆನ್ಫ್ರೆಂಡ್. ಯುವ ಲೇಖಕರ ಬಳಗ. ವಾರಕ್ಕೊಮ್ಮೆ ಸಭೆ. ಎಲ್ಲ ಲೇಖಕರ ಲೇಖನಗಳನ್ನೂ ಚೆನ್ನಾಗಿ ಮಾಡಲು ಎಲ್ಲರಿಂದ ಸಲಹೆ ಸ್ವೀಕಾರ. ಅವುಗಳನ್ನು ತಿದ್ದಿ ಮ್ಯಾಗಜಿನ್ಗಳಿಗೆ ಕಳಿಸುವ, ಪ್ರಕಟಣೆಯಾಗುವಂತೆ ನೋಡಿಕೊಳ್ಳುವ ಹೊಣೆ ನನ್ನದು.
"ಪೆನ್ ಫ್ರೆಂಡ್: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ"Category: ಸುದ್ದಿ
ಕನ್ನಡ ತಂತ್ರಜ್ಞಾನ ಮಾನದಂಡಗಳು , ಕಲಿಕಾ ಅಕಾಡೆಮಿ ಪೋರ್ಟಲ್, ಪದಕಣಜ – ದೇಸೀಕರಣ, ಇ – ಆಡಳಿತ ಪದಕೋಶ : ನಾಲ್ಕು ಪ್ರಮುಖ ಆದೇಶಗಳ ಪ್ರಕಟಣೆ
2019 ರ ನವೆಂಬರ್ ತಿಂಗಳಿನಿಂದ ಆರಂಭವಾದ ಕನ್ನಡ ತಂತ್ರಜ್ಞಾನ ಕುರಿತ ಸಮುದಾಯ ಸಂವಾದ, ಸಲಹಾ ಸಭೆಯಿಂದ ಹಿಡಿದು ನಂತರದ ಹಲವು ಸರ್ಕಾರಿ ಸಭೆಗಳು, ಮೈಸೂರಿನಲ್ಲಿ ನಡೆದ ಎರಡು ದಿನಗಳ ಇ – ಕನ್ನಡ ಕಮ್ಮಟ – ಈ ಹೆಜ್ಜೆಗಳ ಮುಂದುವರಿಕೆಯಾಗಿ ಕರ್ನಾಟಕ ಸರ್ಕಾರ ಇ – ಆಡಳಿತ ಇಲಾಖೆಯು ಇದೇ ಮಾರ್ಚ್ 13 ರಂದು ನಾಲ್ಕು ಪ್ರಮುಖ ಸರ್ಕಾರಿ ಆದೇಶಗಳನ್ನು ಪ್ರಕಟಿಸಿದೆ (ಇ-ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 211 ಇಜಿಎಂ 2019 ಬೆಂಗಳೂರು, ದಿನಾಂಕ : 13-03-2020) ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಆದೇಶಗಳು ಹೀಗಿವೆ: ಕನ್ನಡ ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಸ್ಥೂಲ ಮಾನದಂಡಗಳು ಇ-ಕನ್ನಡ ಕಲಿಕಾ ಅಕಾಡೆಮಿ ಹಿನ್ನೆಲೆಯಲ್ಲಿ ಪೋರ್ಟಲ್ ನಿರ್ವಹಣೆ…
"ಕನ್ನಡ ತಂತ್ರಜ್ಞಾನ ಮಾನದಂಡಗಳು , ಕಲಿಕಾ ಅಕಾಡೆಮಿ ಪೋರ್ಟಲ್, ಪದಕಣಜ – ದೇಸೀಕರಣ, ಇ – ಆಡಳಿತ ಪದಕೋಶ : ನಾಲ್ಕು ಪ್ರಮುಖ ಆದೇಶಗಳ ಪ್ರಕಟಣೆ"ನಾನು ಮೈಸೂರಿನಲ್ಲಿ ಇದ್ದ ನಾಲ್ಕು ವರ್ಷಗಳ ಕಾಲ ಹತ್ತಾರು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಬಸ್ಸು ಅಥವಾ ರೈಲಿನಲ್ಲಿ ರಾಮನಗರವನ್ನು ಹಾದುಹೋಗುವಾಗ ಅಂಥಾದ್ದೇನೂ ಮಹತ್ವ ಅನ್ನಿಸುತ್ತಿರಲಿಲ್ಲ. ರಾಮನಗರದ ಪತ್ರಕರ್ತ ಮತ್ತು ಜನಪದ ಸಂಶೋಧನಾ ವಿದ್ಯಾರ್ಥಿ ಶ್ರೀ ರುದ್ರೇಶ್ವರ ಅವರ ಅಜ್ಜ ಅಜ್ಜಿ ಸ್ಮರಣಾರ್ಥ ಪ್ರಗತಿ ವಿದ್ಯಾಸಂಸ್ಥೆಗೆ ಬ್ಯಾಂಡ್ಸೆಟ್ ವಿತರಣಾ ಕಾರ್ಯಕ್ರಮಕ್ಕೆ ಫೆ. 23 ರಂದು ಹೋಗಿದ್ದೆ. ಈ ಕಾರ್ಯಕ್ರಮದಲ್ಲಿ ಹಲವು ನಾಗರಿಕರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಮೂಲಕ ನಾನು ರಾಮನಗರದ ಹೃದಯವನ್ನೇ ನೋಡಿದಷ್ಟು ಸಂತಸವಾಯಿತು.
"ರಾಮನಗರದ ಹೃದಯ"ನಾನೇ ಕನಸು ಕಂಡು ಹೊಣೆ ಹೊತ್ತಿದ್ದ ಭಾರತವಾಣಿ ಯೋಜನೆಗೆ ನಾಲ್ಕು ವರ್ಷಗಳ ನಂತರ ರಾಜೀನಾಮೆ ನೀಡಿ, ಕರ್ನಾಟಕ ಸರ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಕಾರ್ಯ ಆರಂಭಿಸಿದ ಈ ದಿನದ ಕೊನೆಗೆ ನನಗೆ ಅನ್ನಿಸಿದ್ದು…… ಬದಲಾವಣೆ ಜಗದ ನಿಯಮ! ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿ ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ಅವರಿಂದ ನನ್ನ ಹೊಣೆ ನಿರ್ವಹಿಸಲು ಬೇಕಾದ ಕಿವಿಮಾತುಗಳನ್ನು ಸ್ವೀಕರಿಸಿದೆ. ಮೊನ್ನೆ ಭಾರತವಾಣಿ ತಂಡ ಮತ್ತು ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರು, ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರಿಂದ ಬೀಳ್ಕೊಡುಗೆಯ ಭಾವುಕ ಸನ್ನಿವೇಶ ಅನುಭವಿಸಿದೆ. ಇಂದು ನನಗೆ ವಹಿಸಿದ ಹೊಣೆಯನ್ನು ನಿರ್ವಹಿಸಲು ಆರಂಭಿಸಿದೆ. ಮೂರ್ನಾಲ್ಕು ದಿನಗಳಲ್ಲಿ ಏನೆಲ್ಲ ಬದಲಾವಣೆ ಆಗಿಹೋಯಿತು…
"ಬದಲಾವಣೆ ಜಗದ ನಿಯಮ! ಉತ್ಕೃಷ್ಟತೆಯೇ ಬದುಕಿನ ಬಹುದೊಡ್ಡ ಸವಾಲು!!"ಚಿಕ್ಕ ಹುಡುಗನಾಗಿದ್ದ ದಿನಗಳಿಂದ ಯಕ್ಷಗಾನ ಪ್ರಸಂಗಗಳನ್ನು ರಾತ್ರಿಯಿಡೀ ನೋಡುತ್ತ ಬೆಳೆದ ನನಗೆ ಅದೊಂದು ತಮ್ಯ ಲೋಕ. ನಿನ್ನೆ (೮ ಸೆಪ್ಟೆಂಬರ್ ೨೦೧೯) ಬೆಂಗಳೂರಿನಲ್ಲಿ ಯಕ್ಷ ಸಿಂಚನದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದಾಗ ತುಂಬಾ ಸಂತೋಷವಾಯಿತು. ಬಹುದಿನಗಳ ನಂತರ ಅರ್ಧ ದಿನದಷ್ಟಾದರೂ ಯಕ್ಷಗಾನದ ವಿವಿಧ ಆಯಾಮಗಳನ್ನು ಅರಿಯುವುದಕ್ಕಾಗಿ ಕಳೆದೆ ಎಂಬ ಸಮಾಧಾನವಾಯಿತು. ಈ ಕಾರ್ಯಕ್ರಮಕ್ಕೆ ಮಿತ್ರಮಾಧ್ಯಮ ಟ್ರಸ್ಟ್ನಿಂದಲೂ ಕಿರು ಬೆಂಬಲ ನೀಡಿದ್ದು ಸಾರ್ಥಕ ಅನ್ನಿಸಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಪರಂಪರೆಯಲ್ಲಿ ಮರೆತೇ ಹೋದ / ಅಪರೂಪದ ಬಳಕೆಯಲ್ಲಿರುವ ಕೆಲವು ಹೆಜ್ಜೆಗಳನ್ನು ಹಿರಿಯ ಕಲಾವಿದ ಶ್ರೀ ಬನ್ನಂಜೆ ಸಂಜೀವ ಸುವರ್ಣರು ತೋರಿಸಿದ್ದು ಮರೆಯಲಾಗದ ಅನುಭವವೇ. ೬೫ರ ಹರೆಯದಲ್ಲೂ ಅವರ ಅಭಿನಯ, ಲಾಲಿತ್ಯ, ಲಯ-ಲಾಸ್ಯ, ಗತಿ – ಎಲ್ಲವೂ ಪರಂಪರೆಯ ಬಿಳಲುಗಳೊಂದಿಗೇ ಚಿತ್ತಾಕರ್ಷಕವಾಗಿ…
"ಯಕ್ಷ ಸಿಂಚನ ದಶಮಾನೋತ್ಸವ : ಒಂದು ಖುಷಿಯ ದಿನ"ಹೆಗ್ಗೋಡು ಮನು ಆ ವಿಸಿಟಿಂಗ್ ಕಾರ್ಡನ್ನು ಪೋಸ್ಟ್ ಮಾಡದೇ ಇದ್ದಿದ್ದರೆ ನಾನು ನನ್ನ ಬದುಕಿನ ಅತ್ಯಂತ ಇಂಟೆರೆಸ್ಟಿಂಗ್ ಕೆಲಸದ ಈ ಬ್ಲಾಗ್ ಬರೆಯುತ್ತಿರಲಿಲ್ಲ! ಏನೂ ಬರೆಯುವುದು, ಓದುವುದು ಬೇಡ ಎಂಬ ಮೂಡಿನಲ್ಲೇ ದಿನ ಕಳೆಯುತ್ತಿರುವ ನನಗೆ ಕೆಲವರಿಗಾದರೂ ಮಾಹಿತಿ ಹಂಚಿಕೊಳ್ಳಲು ಒಂದಷ್ಟು ಬರೆಯೋಣ ಅನ್ನಿಸಿ…. 1999-2001ರ ಆ ದಿನಗಳನ್ನು ಜನ ಡಾಟ್ಕಾಮ್ ಯುಗ ಎಂದು ಕರೆಯುತ್ತಿದ್ದರು. ಎಲ್ಲೆಂದರದಲ್ಲಿ ಹೊಸ ವೆಬ್ಸೈಟ್ ಹುಟ್ಟಿಕೊಳ್ಳುತ್ತಿತ್ತು. ಪ್ರತಿಯೊಂದೂ ವೆಬ್ಸೈಟ್ ಆರಂಭವಾದಾಗ ಒಂದು ಕ್ರಾಂತಿಯೇ ಆಗಿಬಿಟ್ಟಿತು ಎಂಬ ಚರ್ಚೆ ಮಾಧ್ಯಮದ ಪಡಸಾಲೆಗಳಲ್ಲಿ ಕೇಳಿ ಬರುತ್ತಿತ್ತು. ಅಷ್ಟು ಹೊತ್ತಿಗೆ ಕಂಪ್ಯೂಟರ್ ಖರೀದಿಸಿ, ಸ್ವತಃ ನಾನೇ ಮೋಡೆಮ್ (೧೪.೪ ಕೆಬಿಪಿಎಸ್ ವೇಗದ್ದು!!!!) ಜೋಡಿಸಿ, ಯಾಹೂ ವೆಬ್ಸೈಟ್ ತೆರೆಯುತ್ತಿದ್ದೆ; ಅಷ್ಟಕ್ಕೇ ನನ್ನ ಪತ್ರಕರ್ತ ಮಿತ್ರರು ಕಂಪ್ಯೂಟರ್…
"ಇ-ದಕ್ಷಿಣ್ ಡಾಟ್ಕಾಮ್ : ಮಿಸ್ ಕಾಲ್ಗೆ ಸಿಕ್ಕಿದ ಕೆಲಸ ಮೂರು ತಿಂಗಳೂ ಇರಲ್ಲ!"ನಿನ್ನೆ (೭ ಆಗಸ್ಟ್ ೨೦೧೯) ವಿಚಾರ ಸಂಕಿರಣವೊಂದರಲ್ಲಿ ಮಾತನಾಡಲು ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಗ್ರಂಥಗಳ ಡಿಜಿಟಲೀಕರಣದ ಬಗ್ಗೆ ಇದ್ದ ನನ್ನ ಗೋಷ್ಠಿ ಮುಗಿದ ಮೇಲೆ ಅಲ್ಲಿನ ಹಳೆಯ ಪತ್ರಿಕೆಗಳ ಸಂಗ್ರಹಾಗಾರಕ್ಕೆ ಹೋಗಿದ್ದೆ. ನೂರಾರು ವರ್ಷಗಳ ಹಿಂದಿನ ದಿನಪತ್ರಿಕೆಗಳು ಮತ್ತು ಅಪರೂಪದ ಪುಸ್ತಕಗಳನ್ನು ನೋಡಿದೆ. ಮೆಲುವಾಗಿ ಮುಟ್ಟಿ ನಮ್ಮ ಪರಂಪರೆಗೆ ಮನದಲ್ಲೇ ನಮಸ್ಕರಿಸಿದೆ. ಈ ಪುಸ್ತಕಗಳ ಜೊತೆಗೇ ಒಂದು ದಪ್ಪನೆಯ ಕನ್ನಡ- ಇಂಗ್ಲಿಶ್ ನಿಘಂಟೂ ಇತ್ತು. ಅದರ ಕೆಲವು ಪುಟಗಳ ಛಾಯಾಗ್ರಹಣ ಮಾಡಿಕೊಂಡು ಬಂದಿದೆ. ಅತಿದೊಡ್ಡ ಕನ್ನಡ – ಇಂಗ್ಲಿಶ್ ನಿಘಂಟು ರೂಪಿಸಿರುವ ಶ್ರೀ ವಿ ಕೃಷ್ಣ ಅವರಿಗೆ ಈ ಪುಟಗಳನ್ನು ಕಳಿಸಿದೆ. ಅದು ರೆವರೆಂಡ್ ವಿಲಿಯಂ ರೀವ್ (೧೭೯೪-೧೮೫೦) ಸಂಪಾದಿಸಿದ ಕನ್ನಡ-ಇಂಗ್ಲಿಶ್ ನಿಘಂಟು ಎಂದು ಮಾಹಿತಿ…
"ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!"ಫೆಬ್ರುವರಿ ೧೫ರಿಂದ ೧೭ರ ವರೆಗೆ ಹೊಸದಿಲ್ಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ `ಸಂಸ್ಕೃತ ಮತ್ತು ಇತರೆ ಭಾರತೀಯ ಭಾಷೆಗಳು- ತಂತ್ರಜ್ಞಾನ’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕನ್ನಡ ಭಾಷಾ ಮಾಹಿತಿ ತಂತ್ರಜ್ಞಾನ ಸಾಧನಗಳ ಬಗ್ಗೆ ಮುಖ್ಯ ಲೇಖಕನಾಗಿ ಒಂದು ಶ್ವೇತಪತ್ರವನ್ನು ಮಂಡಿಸಿದ ಖುಷಿ ನನ್ನದಾಗಿದೆ. ಯಾವುದೇ ಪದವಿ ಇಲ್ಲದೆ ಹೀಗೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆಹ್ವಾನಿತನಾಗಿದ್ದು, ದೇಶ ವಿದೇಶಗಳ ಖ್ಯಾತ ಭಾಷಾ ಸಂಶೋಧಕರು, ಅಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಿದ್ದು, ಮೂರೂ ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿದ್ದು ನನ್ನ ಜೀವನದ ಮುಖ್ಯ ಘಟನೆ ಎಂದು ಹೇಳಲು ನನಗೆ ತುಂಬಾ ಸಂತೋಷವಿದೆ. ಈ ಮರೆಯಲಾಗದ ಘಟನೆಗೆ ಕಾರಣರಾದ, ನನ್ನ ಅಲ್ಪ ತಿಳಿವಳಿಕೆಯನ್ನು ಗುರುತಿಸಿ ಆಹ್ವಾನಿಸಿದ ವಿವಿಯಲ್ಲಿ ಕಂಪ್ಯುಟೇಶನಲ್ ಲಿಂಗ್ವಿಸ್ಟಿಕ್ಸ್ನಲ್ಲಿ ಪ್ರಾಧ್ಯಾಪಕರಾದ ಮತ್ತು ಸ್ಕೂಲ್…
"ನಾನೂ ಜವಹರಲಾಲ್ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!"ಟಿಡಿಐಲ್ ರೂಪಿಸಿದ ಕನ್ನಡ ಓ ಸಿ ಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ : ಚಿತ್ರರೂಪದಲ್ಲಿರುವ ಅಕ್ಷರಗಳನ್ನು ಫಾಂಟ್ ಆಗಿ ಪರಿವರ್ತಿಸುವ ತಂತ್ರಜ್ಞಾನ) ತಂತ್ರಾಂಶದ ಬಗ್ಗೆ ಬರೆದಿದ್ದೆ. ಆಗ ಶ್ರೀ ಓಂಶಿವಪ್ರಕಾಶ್ ಅವರು ಟೆಸೆರಾಕ್ಟ್ನ 4.0 ಆವೃತ್ತಿಯು ಕನ್ನಡದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿ ಪೋಸ್ಟ್ ಹಾಕಿದ್ದರು. ಇದರ ಬೆನ್ನಿಗೆ ಬಿದ್ದ ನಾನು ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ (ಓಂಶಿವಪ್ರಕಾಶ್ ಅವರು ಲಿನಕ್ಸ್ ಬಳಕೆದಾರರು) ಇದನ್ನು ಬಳಸುವ ಬಗ್ಗೆ ಪ್ರಯೋಗಗಳನ್ನು ನಡೆಸಿದೆ. ಮೊದಲು ಒಂದು ಪುಟವನ್ನು ಪರಿವರ್ತಿಸಿದ ನಾನು ಇಂದು 80 ಪುಟಗಳ ಕನ್ನಡ ಪುಸ್ತಕವನ್ನು ಸಲೀಸಾಗಿ, ಕೇವಲ ಹತ್ತು ನಿಮಿಷಗಳಲ್ಲಿ ಸುಮಾರು ಶೇಕಡಾ 90 ಕಾರ್ಯದಕ್ಷತೆಯ ಪ್ರಮಾಣದಲ್ಲಿ ಪಠ್ಯವನ್ನಾಗಿ ಪರಿವರ್ತಿಸಿದೆ. ಇದನ್ನೇ ಡಿಟಿಪಿ ಮಾಡುವುದಿದ್ದರೆ…
"ಟೆಸೆರಾಕ್ಟ್ ಬಂತು ದಾರಿ ಬಿಡಿ; ಓಸಿಆರ್ ಮಾಡೋ ಚಿಂತೆ ಬಿಡಿ!"