ಎದ್ದಕೂಡ್ಲೇ ಟ್ವೆಲು ಬಿ ತಪ್ಪಿಹೋಯ್ತಲ್ಲಾ ಅನ್ನೋ ದುಗುಡ. ಇನ್ನು ಕಾಂಪ್ಲೆಕ್ಸಿಗೆ ಹೋಗಿಯೇ ಬಸ್ಸು ಹಿಡೀಬೇಕು. ರಂಗನಾಥ್ ಏನು ತಿಳ್ಕೋತಾರೋ ಏನೋ ಈ ಹುಡುಗ ಬರೋವಾಗ್ಲೇ ಲೇಟು… ಇನ್ನು ಕೆಲಸ ಕೊಡೋದಾದ್ರೂ ಹ್ಯಾಗೆ ಮಾರಾಯ ಅಂತ ರಾಗ ಎಳೀತಾರಾ.. ಟಕ್ಟಕ್. ಪೇಪರ್ ಬರೋದೂ ಇಷ್ಟು ತಡ ಆಗಿಬಿಡ್ತಾ.. ಏಳ್ತಿದ್ದ ಹಾಗೇ ಹೊರಗಡೆ ಗಡಿಯಾರ ಇನ್ನೂ ಐದು ಐವತ್ತೈದು ತೋರಿಸ್ತಿರೋದು ನೋಡಿ ಸಮಾಧಾನ. ಅಲಾರಾಂ ಗಡಿಯಾರ ಭಾಳ ಮುಂದೆ ಹೋಗ್ತಿದೆ. ಅಡ್ಜಸ್ಟ್ಮೆಂಟ್ ಸರಿಯಾಗಿಲ್ಲ. ಶರ್ಮಾ ಏನು ಜನರಪ್ಪಾ ಇವರು,ಎಲ್ಲಾ ಕ್ರಾಂತಿ ಆಗ್ಬೇಕು ಅನ್ನೋರು ನಾವು… ಯಾಕೆ ತಲೆ ಕೆಡಿಸಿಕೋಬೇಕು. ರಾತ್ರೀನೇ ನೀರು ಯಥೇಚ್ಚ ಬಂದಿದ್ದು ನೆನಪಾಗಿ ಪರ್ವಾಗಿಲ್ಲಾ ಸ್ನಾನ ಮಾಡಿಯೇ ಟ್ವೆಲುಬಿ ನನ್ಮಗಂದು ಹಿಡಿಬಹ್ದು ಅಂದ್ಕೊಳ್ತಿದ್ದ ಹಾಗೇ ಶರ್ಮಾನ…
"ಕೆಲಸ "Category: ಸಣ್ಣ ಕಥೆಗಳು
ನನ್ನ ಕಥೆಯ ಕಥೆ ನಾನು ಕಥೆಗಾರನಾಗಿದ್ದು ೧೯೮೨ರಲ್ಲಿ. ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಓದುತ್ತಿದ್ದಾಗ ಕಾಲೇಜು ಕಥಾಸ್ಪರ್ಧೆಯಲ್ಲಿ ಡಿಗ್ರಿ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಪ್ರಥಮ ಬಹುಮಾನ ಪಡೆದ ಕಥೆ: ಪಲಾಯನ. ಎಲ್ಲ ನೆನಪುಗಳನ್ನೂ ಗಳಹಿದಂತೆ ಇದ್ದ ಈ ಕಥೆಯು `ಕನ್ನಡಪ್ರಭ`ದಲ್ಲಿ ೧೯೮೪ರ ಫೆಬ್ರುವರಿಯಲ್ಲಿ ಪ್ರಕಟವಾಯಿತು. ೨೦ ರೂ. ಸಂಭಾವನೆಯೂ ಮನಿಯಾರ್ಡರ್ ಮೂಲಕ ಬಂತು.
"ಕ್ಯಾಪ್ಸಿಕಂ ಮಸಾಲಾ: ಕಥಾ ಸಂಕಲನ [ಬೇಳೂರು ಸುದರ್ಶನ]"ಹೆಗ್ಗಡದೇವನಕೋಟೆಯಡೀ ಬಕಾಸುರನಂತೆ ತಿಂದ ಆ ಕತ್ತಲಿನಲ್ಲಿ ಗೆಸ್ಟ್ಹೌಸ್ನ ಕಿರುದಾರಿಯನ್ನು ಹುಡುಕುವುದು ಕಷ್ಟವೇನಲ್ಲ. ಎಲ್ಲರ ಹತ್ರಾನೂ ಮೊಬೈಲ್ ಇದೆಯಲ್ಲ! ರಮೇಶನ ನೋಕಿಯಾ ಮೊಬೈಲಿಂದ ಸೂಸಿದ ಬೆಳಕಿನಲ್ಲಿ ಮಣ್ಣುಹಾದಿ ಸ್ಪಷ್ಟವಾಗಿ ಗೋಚರವಾಗುತ್ತಿದ್ದಂತೆ ನಮ್ಮ ಕಾಟೇಜೂ ಬಂತು ಎಂದು ರಮೇಶ ಘೋಷಿಸಿದ. ಎಡಗಡೆ ನೀವು, ಪ್ರಸಾದ್ ಸರ್ ಉಳೀರಿ ಸರ್, ಬಲಗಡೆ ರಾಬಿನ್ ಮತ್ತು ಡಕೋಡ ಎಂದು ಮೊದಲೇ ಅಲಾಟ್ ಮಾಡಿದ ಹಾಗೆ ಸೂಚಿಸಿದ ರಮೇಶ.
"ಕಥೆ: ಜೀತ [೨೦೧೦]"[ನಾನು ಬರೆದ ಮೊದಲನೇ ಕಥೆ ಇದು! ಇಂದಷ್ಟೇ – ೩೦.೯.೨೦೧೧- ಹಿಂದೊಮ್ಮೆ ನನ್ನ ಆತ್ಮೀಯ ನಾಗಿದ್ದ ಗೆಳೆಯನೊಬ್ಬ ಈ ಕಥೆಯನ್ನು ಪ್ರಕಟಿಸಿದ ಮಯೂರದ ಪ್ರತಿಯನ್ನು (ಆಗಸ್ಟ್ ೧೯೯೧) ನಾಜೂಕಾಗಿ , ಹರಿದುಹೋದ ಹಿಂಪುಟವನ್ನೂ ಜೋಡಿಸಿ – ಕೊರಿಯರ್ ಮೂಲಕ ವಾಪಸು ಮಾಡಿದ. ಈಗ ನೋಡಿದರೆ ಈ ಕಥೆ ಒಂದು ರೀತಿಯಲ್ಲಿ ಕೊಲಾಜ್ ಕಥೆ. ನನ್ನ ಹಲವು ಕವನಗಳ, ಇನ್ನೊಂದು ಕಥೆಯ ಕೊಂಡಿಗಳನ್ನು ಇಲ್ಲಿ ಕಾಣಬಹುದು. ಕವನಗಳೂ ಈ ಕಥೆಗಿಂತ ಮೊದಲು ಮತ್ತು ಆಮೇಲೆ ಬರೆದವು. ಇನ್ನೊಂದು ಕಥೆಯನ್ನು ನಾನು ಆಮೇಲೆ ಬರೆದಿದ್ದು. ಹೈಪರ್ಲಿಂಕ್ಗಳ ಮೂಲಕ ನೀವು ಅಲ್ಲಿ ಇಲ್ಲಿ ಸಾಗಿ ಓದಿದರೆ, ಈ ಕಥೆಯ ಇತರೆ ಆಯಾಮಗಳನ್ನೂ ಹುಡುಕಿಕೊಳ್ಳಬಹುದು! ಕಥೆ, ಕವನ ಎಂದಮೇಲೆ ಅಲ್ಲಲ್ಲಿ ಕಲ್ಪನೆ…
"ಸಂಬಂಧ : ನನ್ನ ಬದುಕಿನ ಹೈಪರ್ಲಿಂಕ್ಗಳ ಮೊದಲ ಕಥೆ ಓದಿ!"ಈ ಸಲ ರಾಜಿಗೆ ಸರಿಯಾಗಿ ಹೇಳಿಬಿಡಬೇಕು.ನಾಳೆ ಎಷ್ಟು ಹೊತ್ತಾದರೂ ಸರಿ, ನನ್ನ ಜೊತೆಗೆ ಕಾಲ ಕಳೆಯಲು ಬರಲೇಬೇಕೆಂದು.ಅವಳಿಗೆ ಹೇಳಲೇಬೇಕು, ನಾನು ಅವಳಿಗೆ ಒಂದು ಮುತ್ತು ಕೊಡುವುದು ಬಾಕಿ ಇದೆ ಎಂದು.ಎಷ್ಟು ದಿನ ಆಂತ ಹೀಗೆ ಕಾಯುವುದು ? ಅವಳಿಗೆ ಈಗಲಾದರೂ ಗೊತ್ತಾಗುವುದಿಲ್ವಾ ? ಹಾಗಾದರೆ ಅವಳು ನನಗೆ ದಿನಾಲೂ ಫೋನು ಮಾಡುವುದಾದರೂ ಯಾಕೆ ? ವಾರಕ್ಕೊಂದು ಇ-ಮೈಲು ಕಳಿಸುವುದಾದರೂ ಯಾಕೆ ? ಪ್ರೀತಿ ಇಲ್ಲದ ಮೇಲೆ ಮಾತುಕತೆಯ ಹೂವು ಅರಳಿದ್ದಾದರೂ ಹೇಗೆ ? ಪತ್ರ ಬರೆಯಲಿಕ್ಕೆ ಬರುತ್ತೆ. ಇ-ಮೈಲು ಕಳಿಸಲಿಕ್ಕೆ ಬರುತ್ತೆ. ಒಮ್ಮೊಮ್ಮೆ ಚಾಯ್ಟೈಮ್ ಡಾಟ್ ಕಾಮ್ನ ಚಾಟ್ರೂಮಿಗೆ ಬಂದು ಹರಟಲು ಬರುತ್ತೆ.ಫೋನಿನಲ್ಲಿ ಮಾತಾಡಿದಾಗ ಆಳಕ್ಕೆ ಬರುತ್ತೆ. ಒಂದು ಮುತ್ತು ತಗೊಳ್ಳಲಿಕ್ಕೆ ಬರಲ್ವಾ? ಒಂದು ಮೆದುವಾದ…
"ಒಂದು ಮುತ್ತಿನ ಕಥೆ"ಅನಿಟಾ. ಟಿ ಬಂದ ಅಕ್ಷರಗಳೆಲ್ಲ ಟಕಾರದ್ದು ಎಂದು ತಿಳಿದೇ ಬೆಳೆದವಳು. ಈ ಡಿಜಿಟಲ್ ಕಚೇರಿಯಲ್ಲಿ ಪ್ರೊಡ್ಯೂಸರ್. ಅವಳ ಕಣ್ಣುಗಳಲ್ಲಿ ಏನಿದೆ ? ಯಾವುದೇ ಐಟಿ ಕಚೇರಿಗೆ ಹೋಗಿ ಶೂಟಿಂಗ್ ಮಾಡಬಲ್ಲೆ ಅನ್ನೋ ಉತ್ಸಾಹ. ಅವಳ ಉಡುಗೆ ಗರಿಗರಿ. ಒಮ್ಮೆ ಪ್ಯಾಂಟು, ಟೀ ಶರ್ಟು. ಇನ್ನೊಮ್ಮೆ ಚೂಡಿದಾರ್. ಅವಳನ್ನೂ ಸೇರಿಸ್ಕೊಂಡು ಎಲ್ಲರ ಕುತ್ತಿಗೆಯಲ್ಲಿ ನಾಯಿಬೆಲ್ಟು ಮಾತ್ರ ಜೋತುಬಿದ್ದಿರುತ್ತೆ. ಅದನ್ನು ತೊಡೋದೂ ಒಂದು ಕಲೆ. ಕೆಲವರು ಸೊಂಟದ ಬೆಲ್ಟಿನ ಜೊತೆ ಸೇರಿಸ್ತಾರೆ. ಹುಡುಗೀರು ಅದನ್ನು ಸರದ ಬದಲಿಗೆ ತೊಟ್ಕೋತಾರೆ. ಈ ಬೆಲ್ಟಿನಲ್ಲಿರೋದೇ ಒಂದು ಡಿಜಿಟಲ್ ಐಡೆಂಟಿಟಿ ಕಾರ್ಡ್. ಹೊರಗೆ ವಿಸಿಟಿಂಗ್ಕಾರ್ಡ್ ಥರ. ಒಳಗೆ ಯಾವುದೋ ಸಂಕೇತ. ಕಚೇರಿಗೆ ಬಂದ, ಹೋದ ಸಮಯವನ್ನು ಒಳಗೆ ಕಂಪ್ಯೂಟರಿಗೆ ರವಾನಿಸೋ ವ್ಯವಸ್ಥೆ .
"ನಾಯಿಬೆಲ್ಟು"‘ನೀನೂ ಕಲಾವಿದ; ನಾನೂ ಕಲಾವಿದ. ಚೌಕಾಶಿ ಯಾಕೆ ಮಾಡ್ತೀಯ? ಕೊಡು ನಾನೂರಾಐವತ್ತು ’ ಬಲಬೀರ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಾಗ ನಾನು ಮಾತಾಡಲಾಗಲಿಲ್ಲ. ಬಾನ್ಸುರಿ ಏನೆಂದು ಗೊತ್ತಿಲ್ಲದೇ ಪೀಪಿ ಥರ ಊದಬೇಕೆಂದು ಯಾವುದೋ ಭಾಷೆಯ ಯಾವುದೋ ಯುವಕ ಅವನ ಬಳಿ ವಾದಿಸುತ್ತಿದ್ದ. ಅವನ ಗೆಳತಿಯಂತೂ ಹೇಗಾದರೂ ತನ್ನ ಹುಡುಗ ಬಾನ್ಸುರಿ ಬಾರಿಸಿಯೇ ಬಾರಿಸುತ್ತಾನೆ ಎಂಬ ಹುಮ್ಮಸ್ಸಿನಲ್ಲಿ ಪರ್ಸ್ ಬಿಚ್ಚುತ್ತಿದ್ದಳು. ಸಂಜೆಯ ಬಣ್ಣಗಳನ್ನು ಹೊದ್ದುಕೊಂಡ ಕನಾಟ್ಪ್ಲೇಸ್ ದಿಲ್ಲಿಯ ನರ-ನಾರಿಯರ ಏಕೈಕ ಶಾಪಿಂಗ್ ಏರಿಯಾ ಎಂಬಂತೆ ಬಳುಕುತ್ತಿತ್ತು. ನಾವು – ಅಂದರೆ ನಾನು ಮತ್ತು ಬಿಲಾಸ – ಮಾತ್ರ ಒಂದಷ್ಟು ವಿಂಡೋ ಶಾಪಿಂಗ್ ಮಾಡುತ್ತ, ಸೆಖೆಯಾದಾಗೆಲ್ಲ ಎಸಿ ಅಂಗಡಿಗಳನ್ನು ಹೊಕ್ಕು ಬರುತ್ತ ದಿಲ್ಲಿಯ ಮಾನ್ಸೂನ್ ಧಗೆಯನ್ನು ಎದುರಿಸುತ್ತಿದ್ದೆವು. ಚೆನ್ನಾಗಿ ವಾರ್ನಿಶ್…
"ಬಿಲಾಸ"(Published in Hosadigantha Yugadi 2008 issue) ಇನ್ನೇನು ವಿಮಾನ ಬೆಂಗಳೂರಿನಿಂದ ಬಂದೇ ಬಿಡುತ್ತದೆ ಎಂಬಂತೆ ದೂರದ ಗೋಪುರದ ಸೂಚಕ ದೀಪವು ಗಿರಗಿರ ತಿರುಗುತ್ತ ಮಿನುಗತೊಡಗಿತು. ನಮ್ಮ ಫೋಟೋಗ್ರಾಫರ್ ಗಡಬಡಿಸಿ ಸೀದಾ ಟರ್ಮಾಕಿನತ್ತ ನಡೆದ. ದಿನದ ಮೊದಲನೇ ವಿಮಾನ ಬಂತಲ್ಲ ಎಂಬ ಕರ್ತವ್ಯಪ್ರeಯಿಂದ ಪೇದೆಗಳು ಎದ್ದು ಟೋಪಿಯನ್ನು ಸರಿಪಡಿಸಿಕೊಂಡು, ಪ್ಯಾಂಟನ್ನು ಬಿಗಿ ಮಾಡಿಕೊಳ್ಳುತ್ತ ನಿಂತರು. ಸಖಿಯರೇ ಇಲ್ಲದ ಈ ನಿಲ್ದಾಣದ ಏಕಕ ಅಧಿಕಾರಿ ಯಾಂತ್ರಿಕವಾಗಿ ಆಕಾಶ ನೋಡತೊಡಗಿದ. ಅತಿಥಿಗಳನ್ನು ಸ್ವಾಗತಿಸಲೆಂದೇ ಹಾಕಿಕೊಂಡ ಯೂನಿಫಾರಂನ ವಿಚಿತ್ರ ಗಡಸಿನಲ್ಲಿ ನಾನೂ ಚಡಪಡಿಸತೊಡಗಿದೆ. ಗಾಜಿನ ಸೀಲಿಂಗಿನಿಂದ ನೇತಾಡುತ್ತ್ತಿದ್ದ ಆ ಮೀನಿನ ಬಲೂನುಗಳು ನಿಶ್ಚಲವಾಗಿದ್ದವು. `ನೋಡಿ, ನಮ್ಮೂರಿನಲ್ಲಿ ಬಣ್ಣ ಬಣ್ಣದ ಮೀನುಗಳು ಹ್ಯಾಗೆ ಬರಿ ಆಕಾಶದಲ್ಲಿ ಈಜಾಡುತ್ತಿವೆ, ನೀರಿಲ್ಲದೆ…’ ಎಂದು ನನ್ನ…
"ಹದಿನಾರನೇ ಕೆಲಸ"ಒಂದು ಹಸಿರು ಎಲೆ ನನ್ನ ಹಳೆ ಡೈರಿಯ ಒಳಗೆ ಕೂತಿದೆ. ನಿಮ್ಮ ಡೈರಿಯಲ್ಲೂ ಅಂಥ ಒಂದು ಎಲೆಯೋ, ಹೂವೋ, ಕಾಗದವೋ. ನಾನು ನಿಮ್ಮನ್ನು ನೋಡಿಲ್ಲ. ನಿಮ್ಮ ನೆನಪುಗಳನ್ನು ತಿಳಿದಿಲ್ಲ. ನನ್ನನ್ನು ಕ್ಷಮಿಸಿ. ನಾನು ಬರೆದಿರೋದನ್ನ ನೀವು ಓದುತ್ತೀರಿ. ಅಷ್ಟೆ. ಅದಕ್ಕಾಗಿ ನಾನು ಆ ಹಸಿರು ಎಲೆಯ ಕಥೆಯನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ. ನನಗೂ ಈಗ ಆ ಹಸಿರೆಲೆ ಎಲ್ಲಿದೆ ಎಂದು ಸ್ಪಷ್ಟವಾಗಿ ಗೊತ್ತಿಲ್ಲ. ನನ್ನ ಎಲ್ಲಾ ವರ್ಷಗಳ ಡೈರಿಗಳನ್ನೂ ಜತನದಿಂದ ಇಟ್ಟುಕೊಂಡು ಬಂದಿದ್ದೇನೆ, ಅವು ನಾಗಂದಿಗೆಯ ಮೇಲೆ ಸಾಲಾಗಿ ಪೇರಿಸಿರುವ ಪುಸ್ತಕದ ಯಾವುದೋ ಬಾಕ್ಸಿನಲ್ಲಿ ಇದೆ. ಅಷ್ಟೆ. ಇಷ್ಟಾಗಿಯೂ ನನಗೆ ನನ್ನ ಆ ಹಸಿರೆಲೆ ಎಲ್ಲಿದೆ ಗೊತ್ತಿಲ್ಲ. ತಲೆ ಎತ್ತಿ ನೋಡಿದರೆ, ಡೈರಿಯ ಪುಟಗಳು ಕಾಣುತ್ತವೆ.“ನನ್ನ…
"ಹಸಿರೆಲೆ,ಗಡಿಯಾರ,ಪಾಪಿನ್ಸ್"೧೯೮೩ರ ಅಕ್ಟೋಬರ್ ತಿಂಗಳಿನ ಮೂವತ್ತನೇ ತಾರೀಖಿನ ದಿನಚರಿ ಪುಟದಿಂದಲೇ ಈ ಕಥೆಯನ್ನು ಆರಂಭಿಸಬಹುದಾದರೆ… ಭಾನುವಾರ ಮುತ್ತಣ್ಣ. ಸೋಮವಾರ ರಾಮರಾವ್. ಮಂಗಳವಾರ ಸುಬ್ರಹ್ಮಣ್ಯ ಭಟ್. ಬುಧವಾರ ಮಂಜಣ್ಣ. ಗುರುವಾರ ಕೃಷ್ಣಾರೆಡ್ಡಿ. ಶುಕ್ರವಾರ ಮಂಗಳಗೌರಿ. ಶನಿವಾರ ಖಾಲಿ.
"ಶಂಕರನಾರಾಯಣನ ಸೈಕಲ್ಲು ಪುರಾಣ"