ಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!

ಇವತ್ತು ಬೆಳಗ್ಗೆ ಪತ್ರಿಕೆ ಬರಲ್ವಲ್ಲ ಎಂದು ಮಂಚದ ಬಳಿ ಇಟ್ಟುಕೊಂಡಿದ್ದ ಐಪ್ಯಾಡ್‌ನ್ನು ತೆರೆದು ಗೂಗಲ್‌ ನ್ಯೂಸ್‌ ಪುಟಕ್ಕೆ ಹೋದರೆ, ಮೊದಲ ಸಾಲೇ ಸ್ಟೀವ್‌ ಜಾಬ್ಸ್‌ ಇನ್ನಿಲ್ಲ ಎಂಬ ಸುದ್ದಿ. ಅಘಾತವೇ ಆಯಿತು. ೫೬ರ ಹರೆಯದಲ್ಲಿ ಏನೆಲ್ಲ ಮಾಡಿ ಇಡೀ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ ಈ ಮಹಾಶಯ ಇನ್ನಷ್ಟು ದಿನ ಇದ್ದಿದ್ದರೆ ಇನ್ನೂ ಏನೆಲ್ಲಾ ಮಾಡುತ್ತಿದ್ದರೇನೋ? 

ಅವರು  ಆಗಸ್ಟ್‌ನಲ್ಲಿ ಆಪಲ್‌ ಸಂಸ್ಥೆಯಿಂದ ನಿವೃತ್ತರಾದಾಗ ಜಗತ್ತಿನಲ್ಲೆಲ್ಲ (ಕನ್ನಡ ಮಾಧ್ಯಮಗಳನ್ನೂ ಸೇರಿಸಿಕೊಂಡು)  ಅವರನ್ನು  ಹೊಗಳಿ, ಹೊಗಳಿ ಬರೆದ ಲೇಖನಗಳು ಪ್ರಕಟವಾದವು. ಆದರೆ ಕೆಲ ವರ್ಷಗಳಿಂದ ಮುಕ್ತ ತಂತ್ರಾಂಶದ ಬಗ್ಗೆ ತಲೆ ಕೆಡಿಸಿಕೊಂಡಿದ್ದ ನನಗೆ  ಅವರು ಪ್ರೊಪ್ರೈಟರಿ ತಂತ್ರಾಂಶದ ಮಹಾ ಕ್ರಾಂತಿಕಾರ ಅನ್ನಿಸಿತ್ತೇ ಹೊರತು ಸಾಮುದಾಯಿಕ ಒಳಿತಿನ, ಹಂಚಿಕೆಯ ಗುಣಗಳೇನೂ ಕಾಣಲಿಲ್ಲ. ಅವರ  ಸೃಜನಶೀಲತೆಯ ಬಗ್ಗೆ ಮಾತನಾಡುವಾಗ ಅವರು  ಬಿಟ್ಟುಹೋದ ಪ್ರೊಪ್ರೈಟರಿ ತಂತ್ರಾಂಶದ ಬಿಗಿಬಂಧದ ಸಮಾಜಕ್ಕೆ ಅಷ್ಟೇನೂ ಒಳಿತಾಗದ  ಪರಂಪರೆಯ ಬಗ್ಗೆಯೂ ಬರೆಯದೇ ಇದ್ದರೆ ತಪ್ಪಾಗುತ್ತದೆ ಅನ್ನಿಸಿ ಕೆಲವು ಮಾಹಿತಿಗಳನ್ನು ಹುಡುಕಿ ಗೀಚರ್‌ (ಗೂಗಲ್‌ನಿಂದ ಆರಿಸಿ ಬರೆದದ್ದೆಲ್ಲ ಗೀಚರ್‌, ಇದು ನನ್ನ ಪದಶೋಧ) ಬರೆಯಲು ಸಿದ್ಧತೆ ಮಾಡಿಕೊಂಡಿದ್ದೆ.  ಆಗಿರಲಿಲ್ಲ.

ಈಗ ಬೆಳಗ್ಗೆ ಅವರ ಸಾವಿನ ಸುದ್ದಿ ಕೇಳಿ, ಜೊತೆಗೇ ಕಂಡ ಅವರ  ಒಂದು ಭಾಷಣವನ್ನು ನೋಡಿದೆ. ಈ ಭಾಷಣದ ವಿಡಿಯೋ ಮತ್ತು ಪಠ್ಯ ಇಲ್ಲಿದೆ. ನೋಡಿ. ಅವರು  ಹೇಳಿದ ಹಲವು ಸಂಗತಿಗಳನ್ನು ನಾನು ನನ್ನ ಬದುಕಿನಲ್ಲೂ ಅಳವಡಿಸಿಕೊಂಡಿದ್ದೇನೆ ಎಂಬ ಭ್ರಮೆಯಲ್ಲಿ ಇದ್ದಿದ್ದಕ್ಕೋ ಏನೋ, ಈ ಭಾಷಣ ಕಂಡಾಪಟ್ಟೆ ಹಿಡಿಸಿತು.  ಅದನ್ನೇ ನಿಮಗಾಗಿ ಕೊಡುತ್ತಿದ್ದೇನೆ.

ಸ್ಟಾನ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ೨೦೦೫ರಲ್ಲಿ ಸ್ಟೀವ್ ಜಾಬ್ಸ್‌ ಮಾಡಿದ ಭಾಷಣ
[youtube http://www.youtube.com/watch?v=UF8uR6Z6KLc]

ಭಾಷಣದ ಪಠ್ಯ ಇಲ್ಲಿದೆ:

http://news.stanford.edu/news/2005/june15/jobs-061505.html

 

0 thoughts on “ಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!

Leave a Reply

Your email address will not be published. Required fields are marked *

one + one =

This site uses Akismet to reduce spam. Learn how your comment data is processed.