ಬಾರ್ಬೀ ಗರ್ಲ್ಸ್

ಬಾರ್ಬೀ ಗರ್ಲ್ಸ್

ನಾವು ಗುವಾಹಟಿಯ ರಸ್ತೆಗಳಲ್ಲಿ ಸುತ್ತುತ್ತಿದ್ದೇವೆ. ರಾಧಿಕಾ ನನ್ನ ಭುಜಕ್ಕೆ ಒರಗಿಕೊಂಡೇ ನಡೆಯುತ್ತಿದ್ದಾಳೆ. ಮಟ ಮಟ ಮಧ್ಯಾಹ್ನ ಬಂದಾಗ ಏನಪ್ಪಾ ಹೀಗೆ  ಅಚಾನಕ್ಕಾಗಿ ಬಂದೆವಲ್ಲ ಎಂದು ಗಾಬರಿಯಾಗಿದ್ದಳು. ಆದರೆ ಇಲ್ಲೂ ನನಗೆ ಗೆಳೆಯರು ಇದ್ದಾರೆ ಎಂದು ಗೊತ್ತಾದ ಮೇಲೆ ಅವಳ ಖುಷಿ ನೋಡಬೇಕು.  ನಾನು ಇಲ್ಲಿಗೆ ಬಂದಿದ್ದೇ ೧೯ ವರ್ಷಗಳ ಹಿಂದೆ…
ರಾಮನಾಥ್ ಇಲ್ಲಿನ ದೂರದರ್ಶನ ಕೇಂದ್ರದಲ್ಲಿ ವಿಡಿಯೋಗ್ರಾಫರ್.  ಆಗ ಬಂದಾಗ ಮನೆಗೆ ಕರೆದುಕೊಂಡು ಹೋಗಿ ನಾಲ್ಕಾರು ದೋಸೆ ತಿನ್ನಿಸಿ ಕಳಿಸಿದ್ದ.  ಅಲ್ಲೇ ಫ್ರಂಟ್‌ಲೈನ್ ವರದಿಗಾರ ಎಂ.ಎಸ್. ಪ್ರಭಾಕರ್ ಮನೆ ಇದೆ. ಅವರೂ ಕನ್ನಡಿಗರೇ.  ಸುನಿಲ್ ಜೊತೆ ಅವರ ರೂಮಿಗೆ ಹೋದಾಗ ನನ್ನನ್ನು ಒಂದ್ಸಲ ಕನ್ನಡದಲ್ಲಿ ಮಾತನಾಡಿಸಿ ಆಮೇಲೆ ಸೀದಾ ಅಸಾಮಿಯಲ್ಲಿ ರಾಜಕೀಯ ಚರ್ಚೆ ಶುರು ಮಾಡಿದ್ದರು. ದಢೂತಿ ದೇಹವನ್ನು ಸರಾಗವಾಗಿ ಚಲಿಸುತ್ತ, ಕಟುವಾಸನೆಯ ಸಿಗರೇಟ್ ಸುಡುತ್ತ ನಮ್ಮನ್ನು ಒಂದೂವರೆ ಗಂಟೆ ಮಾತನಾಡಿಸಿದ್ದರು. ನಾವು ಇಂಫಾಲದ ಆ ಹೋಟೆಲಿನಲ್ಲಿ ಕೂತು  ದೇಶ, ಧರ್ಮ, ಜಾತಿ ಕಲಹ, ಇನ್‌ಫಿಲ್‌ಟ್ರೇಶನ್ ಬಗ್ಗೆ ಹರಟೆ ಹೊಡೆದೆವು. 
ಸುನಿಲ್ ಇಲ್ಲಿಲ್ಲ; ದಿಲ್ಲಿಯಲ್ಲಿ ಲಾಯರ್.  ಗುವಾಹಟಿಯಲ್ಲಿ ಯಾರೂ ಪರಿಚಯವಿಲ್ಲ ಎಂದೇ ಲಾಡ್ಜಿನಲ್ಲಿ ಉಳಿದಿದ್ದೆ. ಪಕ್ಕದಲ್ಲೇ  ಸ್ಟೇಡಿಯಂ. ಮುಂದಿನ ವಾರ ಇಂಗ್ಲೆಂಡ್ ವಿರುದ್ಧ ಒನ್  ಡೇ ಮ್ಯಾಚ್ ಇದೆ. ಕೋಲ್ಕತಾ ಮಾರ್ಗವಾಗಿ ಬಂದಿಳಿದು ಲಾಡ್ಜಿಗೆ ಹೋಗಿ ತಣ್ಣಗೆ ಸ್ನಾನ ಮಾಡಿ ಹೊರಟಿದ್ದೆವು.  ಆಗಲೇ ಸಂಜೆ ಇಣುಕುತ್ತಿದೆ. 
ಯಾರಿಗೂ ಹೇಳದೆ, ಯಾರನ್ನೂ ಕೇಳದೆ ಇಲ್ಲಿಗೆ ಬಂದಿದ್ದೇವೆ…
ಆದರೆ ಇಲ್ಲಿ ಒಳ್ಳೆ ಬಾನ್ಸುರಿ ಸಿಕ್ಕೇ ಸಿಗುತ್ತೆ ಕಣೆ…  ಒಂದೇ ದಿನದಲ್ಲಿ ಹುಡುಕಕ್ಕೆ ಆಗ್ದೇ ಹೋದ್ರೂ ಹೇಗಾದ್ರೂ ಮಾಡಿ ಬಾನ್ಸುರಿ ಮೂಲ ಹುಡುಕಿಯಾದ್ರೂ ವಾಪಸಾಗಬೇಕು ಎಂದಿದ್ದೆ.
ರಾಧಿಕಾ ಕಣ್ಣಿಗೆ ಅಲ್ಲೇ ನಾರ್ತ್ ಈಸ್ಟ್ ಸ್ವಸಹಾಯ ಗುಂಪುಗಳ ವಸ್ತುಪ್ರದರ್ಶನದ ಬೋರ್ಡ್ ಕಣ್ಣಿಗೆ ಬಿತ್ತು.  ಮಗ&
amp;#3
277;ಗದಿಂದ ನೇಯ್ದ ವಿವಿಧ ಬಟ್ಟೆಗಳು, ಕರಕುಶಲ ವಸ್ತುಗಳು, ಮನೆಬಳಕೆಯ ಸಂಬಾರ ಪದಾರ್ಥಗಳು… ಕಾಡುಕೋಣದ ಕೊಂಬಿನಿಂದ ಮಾಡಿದ ವಸ್ತುಗಳು… ಬೆತ್ತದ ತರಹೇವಾರಿ ಅಲಂಕಾರಗಳು…
`ಏಯ್, ಏನಾದ್ರೂ ತಗೊಳಣ. ನಾವು ಇಲ್ಲಿಗೆ ಬಂದ ನೆನಪಿಗೆ.'
`ಬೇಡ ಬಿಡೆ. ನಾಳೆ ಇರ್‍ತೀವಲ್ಲ… ಬಂದು ಹಾಗೇ ಏನಾದ್ರೂ ತಗೊಂಡ್ರಾಯ್ತು.  ಈಗ ಪೇಟೆ ತಿರುಗೋಣ. ಏನಾದ್ರೂ ಕ್ಯಾಸೆಟ್, ಸಿಡಿ ಸಿಗುತ್ತ ನೋಡೋಣ… ನಂಗೆ ಬಿಹು ಕ್ಯಾಸೆಟ್ ಬೇಕು..'
`ಉಹು…. ನಾಳೆ ಇಲ್ಲಿಗೆ ಬರ್‍ಲೇಬೇಕು ಮತ್ತೆ'
ನಾನು ಅವಳ ಭುಜ ಹಿಂಡಿದೆ. ಅವಳಿಗೆ ಗೊತ್ತು ನಾನು ಅವಳ ಮಾತನ್ನು ಮೀರುವುದಿಲ್ಲ. ಅವಳು ನನ್ನ ಮಾತನ್ನು  ಮೀರಲ್ಲ. ಇಬ್ಬರಿಗೂ ಇಬ್ಬರೂ ಬೇಕು.
ಗುವಾಹಟಿಯಲ್ಲಿ  ಬೀದಿ ದೀಪಗಳಿಲ್ಲ. ಕಸವನ್ನು ಸಾಗ ಹಾಕುವವರಿಲ್ಲ. ಫುಟ್‌ಪಾತ್ ಮಾಡಲಿಕ್ಕೆ ಒಂದಡಿ ದಪ್ಪದ  ಕಾಂಕ್ರೀಟ್‌ಚಪ್ಪಡಿಗಳನ್ನು ಬೇಕಾಬಿಟ್ಟಿ ಎಳೆದು ಹಾಕಿದ್ದಾರೆ. ಜನ ಇನ್ನೂ ಹಳ್ಳಿಯಲ್ಲಿ ಇರೋ ಹಾಗೆಯೇ ಇದ್ದಾರೆ. ಭುಜದ ಮೇಲೆ  ಬಿದಿರಿನ ಪಟ್ಟಿ ಹೇರಿಕೊಂಡು ಅದರ ಎರಡೂ ತುದಿಗೆ ಎರಡು ಬುಟ್ಟಿಗಳನ್ನು ತೂಗಿಸುತ್ತ ಬ್ಯಾಲೆನ್ಸ್ ಮಾಡುವ ತರಕಾರಿ ಮಾರುವವರು ಕಣುತ್ತಿದ್ದಾರೆ. ಮುಖ್ಯರಸ್ತೆಯಲ್ಲೂ ಕಬ್ಬಿಣದ ಚಾಕು, ಕತ್ತಿ ಕುಡುಗೋಲುಗಳನ್ನು  ಮಾಡುವ ಸ್ಥಾವರವನ್ನು ಒಬ್ಬ ಅಜ್ಜ ಹಾಕಿಕೊಂಡಿದ್ದಾನೆ. ಊರು ಇನ್ನೂ ಬೆಳೆದೇ ಇಲ್ಲ ಅನ್ನಿಸುತ್ತದೆ. ಕಾರುಗಳಿವೆ, ರಶ್ ಇದೆ. ಬಸ್ಸುಗಳಿವೆ. ಆದ್ರೂ ಗುವಾಹಟಿ ಯಾಕೋ ಹಳ್ಳಿಯ ಹಾಗೇ ಇದೆ. ಬೆಂಗಳೂರಿನ ಥರ ಫ್ಲೈಓವರ್‌ಗಳೂ ಸಾಕಷ್ಟಿವೆ. ಚುನಾವಣಾ ಪ್ರಚಾರ ನಡೆದಿದೆ. ಎ ಜಿ ಪಿ ಒಡೆದಿದೆ. ಬಿಜೆಪಿ ಭರದಿಂದ ನಡೆದಿದೆ. ಕಾಂಗ್ರೆಸ್ ಪ್ರಚಾರಕ್ಕೂ ಅಬ್ಬರ ಬಂದಿದೆ. ಪಕ್ಷಗಳ ಬಾವುಟಗಳನ್ನು ಹಿಡಿದು ಬೈಕ್‌ಗಳಲ್ಲಿ ಸಾಗುವವರು ಕಾಣುತ್ತಿದ್ದಾರೆ.
ನಾವು  ಅಂಗಡಿಗಳನ್ನು ಸುತ್ತಿದೆವು. ಎಲ್ಲೂ ಬಿಹು ಕ್ಯಾಸೆಟ್ ಸಿಗ್ತಾ ಇಲ್ಲ.ಕೊನೆಗೆ  ಆ ಅಂಗಡಿಗಳೂ ಸಿಕ್ಕಿದವು. ಅಲ್ಲಿ ಹೋಲ್‌ಸೇಲ್  ಮಾರಾಟ. ಕೊನೆಗೆ ಬೆಂಗಳೂರಿಂದ ಬಂದವರು ಎಂದೆಲ್ಲ  ಹೇಳಿ  ಎಂಟು ಕ್ಯಾಸೆಟ&amp
;#32
77; ಆರಿಸಿಕೊಂಡೆವು. ಕೊಕ್ರಜಾರ್‌ನ ಜಾನಪದ ಗೀತೆಗಳಿಂದ ಹಿಡಿದು ಭೂಪೇನ್ ಹಝಾರಿಕಾವರೆಗೆ…
`ಯಾಕೋ ನಿಂಗೆ … ಇವೆಲ್ಲ  ನಿಂಗೆ ಇಷ್ಟ ಆಗುತ್ತ?'
`ಇದರಲ್ಲೆಲ್ಲ ಹಿನ್ನೆಲೆ ಸಂಗೀತದಲ್ಲಿ ಕೊಳಲಿನ ನಾದ ಹ್ಯಾಗೆ ಹೊಮ್ಮಿರುತ್ತೆ ಗೊತ್ತ? ಅದನ್ನೆಲ್ಲ ಅಭ್ಯಾಸ ಮಾಡಿದ್ರೆ ನಾವು ಪಹಾಡಿ ಧುನ್ ಬಾರಿಸೋದು ಎಷ್ಟು ಸುಲಭ ಆಗುತ್ತೆ ಗೊತ್ತ…'
`ಗೊತ್ತಿರ್‍ಲಿಲ್ಲ ಮಾರಾಯ. ನೀನು ಕೇಳಿದೀಯ. ನಾನು ಅಸಾಮ್‌ಗೆ ಬರ್‍ತಿರೋದೇ ಇದೇ ಮೊದಲು. ಓಕೆ. ಬೇಗ ಹೊರಡೋಣ.'
ರಾಧಿಕಾ ನನ್ನನ್ನು ಎಳೆಯುತ್ತಿದ್ದಾಳೆ. ನಾವು ಮತ್ತೆ ಹೋಟೆಲಿಗೆ ಹೋಗಿದ್ದೇವೆ. ತಂಗಾಳಿಯನ್ನು ಅನುಭವಿಸುತ್ತ  ಮಲಗಿದ್ದೇವೆ. ನನ್ನ ಲ್ಯಾಪ್‌ಟಾಪ್ ತೆರೆದು ಮತ್ತೆ ಅಬೀದಾ ಪರ್ವೀನ್ ಗಝಲ್ ಹಾಕಿದ್ದೇನೆ. ಆಮೇಲೆ ಪಠಾನ್ ಖಾನ್ ಬಂದಿದಾರೆ. ಬೇಗಂ ಅಖ್ತರ್, ನೂರ್‌ಜಹಾನ್, ಟೀನಾ ಸಾನಿ….
             
ನಾವು ಹಾಗೇ ಪುಟ್ಟ ದೀಪವನ್ನಷ್ಟೆ ಹಾಕಿ ಮಲಗಿದ್ದೇವೆ.
` ….. ನೀನು ನನ್ನ ಮದುವೆಯಾಗ್ತೀಯ?'
`……'
`ಯಾಕೆ  … ಮಾತಾಡು… ನನ್ನ ಮದುವೆಯಾಗ್ತೀಯ? '
`ಆಗ್ತೀನಿ ಅಂದ್ರೆ ಆಗ್ತೀನಿ. ಆಗಲ್ಲ ಅಂದ್ರೆ ಆಗಲ್ಲ…'
`…………'
ಯಾಕೆ ರಾಧೂ…. ಮಾತಾಡಲ್ವ? ಬೇಜಾರಾಯ್ತ?'
`ಹೌದು ಮತ್ತೆ.. ಮದುವೆಯಾಗು ಅಂದ್ರೆ ಆಗಲ್ಲ ಅಂತೀಯ…'
`ಆಗಲ್ಲ ಅಂದಿಲ್ವಲ್ಲೆ… ಹೇಗಾದ್ರೂ ಆಗಬಹುದು ಅಂದೆ..'
`ಹೇಗಾದ್ರೂಆಗೋದಕ್ಕೆ ನಾವು ಇಷ್ಟು ಹತ್ತಿರ ಬೇಕಾಗಿತ್ತ …ಯಾವತ್ತೋ ನಾವು ಪರಸ್ಪರ ಗುಡ್‌ಬೈ ಹೇಳಬಹುದಿತ್ತು…'
`ಹಾಗೆ ಯಾಕೆ ಹೇಳ್ತೀಯ… . ನಿನ್ನನ್ನು ದಕ್ಕಿಸಿಕೊಳ್ಳೋದು ಅಷ್ಟು ಸುಲಭಾನ?'
`ಅಂದ್ರೆ? ನಾನೇನು ನಿಜಕ್ಕೂ ಆಕಾಶದಲ್ಲಿ ಕಾಣೋ ನಕ್ಷತ್ರಾನ? ಅಲ್ಲ ಮಾರಾಯ… ನಾನು ಇಲ್ಲೇ ನಿನಗೆ ಸಿಗೋ ಪುಟ್ಟ ಹುಡುಗಿ ಅಷ್ಟೆ. ನನ್ನ ನೀನು ಮದುವೆಯಾಗ್ತೀಯ ಅಂತ್ಲೇ ಎಲ್ರೂ ತಿಳ್ಕೊಂಡಿದಾರೆ ಗೊತ್ತಲ್ಲ..'
`ತಿಳ್ಕೋಳ್ಳೋದಕ್ಕೇನು ಮಾರಾಯ್ತಿ… ಏನಾದ್ರೂ ತಿಳ್ಕೋಬಹುದು, ಅವ್ರು ಹಾಗೆ ತಿಳ್ಕೊಂಡಿದಾರೆ ಅಂತ ನಾವು ಮದುವೆಯಾಗಬೇಕ?'
`…………………..'
ಅವಳು ನನ್ನ ಎದೆಗೆ ಒರಗಿಕೊಂಡಿದ್ದಾಳೆ… ನಾನು ಅವಳ ಬೆನ್ನಹಿಂದೆ ಕೈ &am
p;#3
257;ಾಕಿ ಎತ್ತಿಕೊಂಡು ನನ್ನ ಮೇಲೆ ಮಲಗಿಸಿಕೊಂಡಿದೇನೆ. ಅವಳ ತಲೆ ಕೂದಲುಗಳು  ಹಾಗೇ ನನ್ನೆದೆಯ ಮೇಲೆಲ್ಲ ಹರಡಿಕೊಂಡಿವೆ. ಅವಳ ಕಾಲುಗಳೆಲ್ಲ ನನ್ನ ಕಾಲಿನ ಮೇಲೆ.. ನನ್ನ ಮೀನಖಂಡಗಳಿಗೆಲ್ಲ ಸುತ್ತು ಮಾಯವಾಗಿದೆ… ಯಾರಿಗೆ ಯಾರು ಸ್ಪರ್ಶದ ಹಿತ ಕೊಡ್ತಿದೇವೆ ಎಂಬುದು ಗೊತ್ತಾಗುತ್ತಿಲ್ಲ.
`ನೋಡು ….. ನೀನು ಹೇಳು ನನ್ನ ಮದುವೆಯಾಗು ಅಂತ. ನಾನು ಆಗ್ತೀನಿ… ಇನ್ನೊಬ್ರು ಹೇಳಿದ್ರು ಅಂತ ನಾನು ಹಾಗೆಮಾಡಕ್ಕಾಗಲ್ಲ… ಪ್ಲೀಸ್ ನಿಂಗೆ ಏನನ್ಸುತ್ತೆ  ಹೇಳು….'
`ನಂಗೂ ಹಾಗೆ ಅನ್ಸುತ್ತೆ ಪುಟ್ಟ… ನಾನು ನಿನ್ನ ಮದುವೆಯಾಗಿಬಿಟ್ರೆ ನಿನ್ನ ಜತೆ ಎಲ್ಲಿಗೆ ಬೇಕಾದ್ರೂ, ಹ್ಯಾಗೆ ಬೇಕಾದ್ರೂ ಅಲೀಬಹುದು. ನಂಗೂ ನಿನ್ನ ಹುಡುಕಾಟ ಇಷ್ಟ ಕಣೋ…'
`ನೀನು ದೊಡ್ಡ ಕೆಲಸದಲ್ಲಿ ಇದೀಯ …. ಮಾಡೆಲಿಂಗ್ ಅಂದ್ರೆ  ಅದಕ್ಕೋಸ್ಕರಾನೇ ತುಂಬಾ ಓಡಾಡ್ಬೇಕು…. ಅದನ್ನೆಲ್ಲ ಹ್ಯಾಗೆ ನಿಭಾಯಿಸ್ತೀಯ?'
`ನೋಡು ಮೊದ್ಲು ನೀನು ನನ್ನ ಮದುವೆಯಾಗ್ತೀಯೋ ಇಲ್ವೋ ಹೇಳು… ಆಮೇಲೆ ಮಾತಾಡ್ತೀನಿ.. ಸುಮ್ನೆ ಕೀಟಲೆ ಮಾಡ್ಬೇಡ…'
`ನಿನ್ನನ್ನು ನಾನು ಮೊದ್ಲು ಪುಟ್ಟಿ ಅಂತ ಕರೀತಿದ್ದೆ.. ಈಗ ದೊಡ್ಡಿ ಅಂತ ಕರೀಬೇಕು ಕಣೆ.. ದೊಡ್ಡವಳಾಗಿದೀಯ….!'
`ಮತ್ತೆ ನೋಡು ತಮಾಷೆ..' ರಾಧಿಕಾ ನನ್ನ ಎದೆಗೆ ಮುಷ್ಟಿಯಿಂದ ಕುಟ್ಟಿದ್ದಾಳೆ. ಮಲ್ಲಿಗೆ ಹೂವಿನ ಹಾಗೆ ನನ್ನೆದೆಗೆ ತಾಗಿದ್ದಾಳೆ..  
 ಆದರೆ ನಾನು ಅವಳನ್ನು ಮದುವೆಯಾಗುವುದು ಸಾಧ್ಯವೆ? ಅಸಾಧ್ಯ ಅನ್ನೋದಾದರೆ ನಾನು ಯಾಕೆ ಅವಳನ್ನು ಹೀಗೆ ಕೂಡುತ್ತೇನೆ. ಅವಳನ್ನು ಅಪ್ಪುತ್ತೇನೆ… ಅವಳ ಎದೆಯಲ್ಲಿ ಹುದುಗಿ ನನ್ನೆಲ್ಲ ದುಮ್ಮಾನಗಳಿಗೆ ದಾರಿ ಹುಡುಕುತ್ತೇನೆ…. ಯಾಕೆ ನಾನು ಅವಳ ಹುಟ್ಟು ಹಬ್ಬದಂದು ನನ್ನನ್ನೇ ಹುಟ್ಟುಡುಗೆಯಲ್ಲಿ  ಅರ್ಪಿಸಿಕೊಳ್ಳಲು ಮುಂದಾದೆ.. ಯಾಕೆ ಅವಳು ನನ್ನನ್ನು ಹೀಗೆ ಕಾಡುತ್ತಾಳೆ… ಯಾಕೆ ಅವಳು ನನ್ನೊಳಗೆ ಕರಗಿಹೋಗುವುದಕ್ಕೆ ಬಯಸುತ್ತಾಳೆ… ರಾಧೂ.. ರಾಧೂ…. ಯಾರೆ ನೀನು ….
ಹಾಗೇ ನನ್ನದೇ ಊಹೆಗಳಲ್ಲಿ ಮುಳುಗಿದ ಹಾಗೆ ಅವಳು ನಿದ್ದೆ ಹೋಗಿದ್ದಾಳೆ. ಅವಳನ್ನು  ಮೆಲ್ಲಗೆ ಸರಿಸಿ ಹೊದಿಕೆ ಹೊದೆ&a
mp;#
3256;ಿದ್ದೇನೆ. ಅವಳೀಗ ನಸುನಗುತ್ತ ಮಗ್ಗುಲಾಗಿದ್ದಾಳೆ. ಅವಳನ್ನು ಇವತ್ತು ಕೂಡಬಾರದು. ಅವಳು ಹಾಗೆಯೇ ಹೂವಿನ ಹಾಗೆ ಮಲಗಿರಬೇಕು… 
ಗಝಲ್‌ಗಳು ಮುಗಿದಿವೆ. ಪ್ರವೀಣ್ ಗೋಡಖಿಂಡಿ .. ಮುಂದೆ ರಶೀದ್ ಖಾನ್, ಬಾಲೇಖಾನ್ ಬರ್‍ತಾರೆ…….ಎಲ್ಲರೂ ನನಗಾಗಿ ಹಾಡುತ್ತಾರೆ. ಎಲ್ಲರೂ ಎಷ್ಟು ಪರ್ಫೆಕ್ಟ್ ಆಗಿ ಸಂಗೀತ ಕಲಿತಿದ್ದಾರೆ. ಎಲ್ಲರೂ  ಹ್ಯಾಗೆ ಸಂಗೀತವನ್ನೇ ಉಸಿರಾಡುತ್ತಾರೆ….
 ಗುರುಗಳು ಹೇಳಿದ್ದೆಲ್ಲ  ಮರೆತೇ ಹೋಗ್ತಿದೆ.. ಯಾವ ಆಲಾಪವನ್ನು ಹ್ಯಾಗೆ ಶುರು ಮಾಡಬೇಕು… ಎಲ್ಲಿ ಝೋಡ್ ಜಾಲ್ ಆರಂಭಿಸಬೇಕು…. ಎಲ್ಲಿ ತಬ್ಲಾದವನಿಗೆ ಕಣ್ಸನ್ನೆ ಮಾಡಬೇಕು… ಎಲ್ಲಿ ನಾನು ಧೃತ್‌ಗೆ ಹೋಗಬೇಕು….  ಗೊತ್ತಿಲ್ಲ.
ಬದುಕಿನ ವೇಗವೂ ನನಗೆ ಗೊತ್ತಿಲ್ಲ. ಸಂಗೀತದ ಲಯವನ್ನು ಇದೀಗ ಕಲಿಯುತ್ತಿದ್ದೇನೆ.
ಅವಳು ನನ್ನನ್ನು ಬಿಟ್ಟರೆ ಬೇರೆಯವನನ್ನು ಮದುವೆಯಾಗುವಳೆ? ಬಹುಶಃ ಇಲ್ಲ. ಅವಳಿಗೆ ನಾನು ಬೇಕು. ನನ್ನ ಅಂಗಾಂಗಗಳನ್ನು ಆಕೆ ಸುಖಿಸಬೇಕು. ಹಾಗೆಯೇ ನನ್ನೊಳಗೆ ಇರೋ ಕಲಿಯುವ ಕುದಿಯೊಳಗೆ ಅವಳೂ ಬೇಯಬೇಕು ಎಂದೆನಿಸಿದೆಯಂತೆ. 
ನಾನು ಅವಳನ್ನು ಬಳಸಿದ್ದು ತಪ್ಪಲ್ಲವೆ? ನಾನು ಹಾಗೆ ಅವಳನ್ನು ಸುತ್ತುವರೆಯಬಾರದಿತ್ತಲ್ಲ…
ಅವಳು ಯಾಕೆ ನನ್ನ ಹತ್ತಿರ ಬಂದಳು… ನನ್ನನ್ನು ಸುತ್ತಿ ಸೆಳೆದಳು.
ಮಲಕ್ಕೋ ಪುಟ್ಟ ಎಂದು ಮುಲುಗುತ್ತ ನನ್ನನ್ನು  ಅಪ್ಪಿಕೊಳ್ಳುತ್ತಾಳೆ.
ನಾನು ಭಾಸ್ಕರ ಚಂದಾವರ್ಕರ್  ಭಾಷಣದ `ಸಂಗೀತ ಸಂವಾದ' ಎತ್ತಿಕೊಂಡಿದ್ದೇನೆ. ಎಲ್ಲಿಗೆ ಬಂದೆ…
ಆಲಾಪದಿಂದ ಆರಂಭವಾಗಿ ಮೊದಲು ಅಸ್ಥಾಯಿ ಅಲ್ಲಿಂದ ಮೊದಲ ಸಾಲು ಮುಖ್ಡಾ, ಅಲ್ಲಿಂದ ಪೂರ್ಣ ಅಸ್ಥಾಯಿ, ಎರಡನೇ ಸಾಲು ಪಲ್ಲವಿ – ಅನುಪಲ್ಲವಿ. ಆಮೇಲೆ ತುಸು ಬಡತ್. ಎಂದರೆ ಸ್ವರೇಲುವಿನ ವಿಸ್ತರಣೆ. ಬಡತ್‌ನಲ್ಲಿ ಶಬ್ದಪ್ರಯೋಗದ ನಿರ್ಬಂಧವಿಲ್ಲ. ಯಾಕೆಂದರೆ ಬಂದಿಶ್‌ನ ಶಬ್ದಗಳನ್ನು ಬಳಸಿದಾಗ ವಾಸ್ತವವಾಗಿ ಅವು ಬೋಲ್ ಎನಿಸಿಕೊಳ್ಳುತ್ತವೆ. ಸ್ವಲ್ಪ ಆಲಾಪದಂಥ ರಚನೆಗೆ ಬೋಲ್ ಆಲಾಪ್  ಎನ್ನುತ್ತಾರೆ.  ಕಿರಾಣಾ ಘರಾನಾದ ಗಾಯಕ ಪೂರ್ಣ ಅಸ್ಥಾಯಿಯಿಂದ ಬೋಲ್ ಆಲಾಪ್&a
mp;z
wnj;ಗೆ ಚಲಿಸುತ್ತಾನೆ. ಅಲ್ಲಿಂದ ರಾಗದ ಸ್ವರೇಲುವಿಗೆ ಬಂದು ಮುಟ್ಟಿಕೊಳ್ಳುತ್ತಾನೆ. ರಾಗದ ನಕ್ಷೆಯನ್ನು ಆಲಾಪ್ ನೀಡುತ್ತಿದ್ದಂತೆ ನಿಮಗೆ ರಾಗದ ಗುರುತು ಹತ್ತಿದೆ. ಸರಿ, ಆದರೆ ಪೂರ್ಣ ಅಸ್ಥಾಯಿಯ ಬಳಿಕ ತಾರಷಡ್ಜವನ್ನು ತಲುಪುವವರೆಗೂ ಹಬ್ಬಿರುವ ರಾಗಲತೆಯಲ್ಲಿ ಅದರ ವ್ಯಾಪಕತೆಯನ್ನು ಅನ್ವೇಷಿಸುತ್ತ ತಳದಿಂದ ತಾರಕದವರೆಗೂ  ಹಂತಹಂತವಾಗಿ ಮುಂದುವರೆಯಬೇಕಲ್ಲ… ಇದನ್ನೇ ಬಡತ್ ಎನ್ನುವುದು. ಪ್ರತಿ ಸ್ವರನೆಲೆಯಲ್ಲಿಯೂ ಸಾಕಷ್ಟು ಸುತ್ತಿ ಸುಳಿದು ಅಲ್ಲಿಂದ ನಂತರದ ಸ್ವರನೆಲೆ ತಲುಪಿ ಮತ್ತೆ ಹಿಂತಿರುಗಿ ಯಾವುದಾದರೊಂದು ಸ್ವರಬಿಂದುವಿನಲ್ಲಿ ಸ್ಥಾಪನೆಗೊಂಡು, ಅಲ್ಲಿಂದ ಮತ್ತೆ ಮುಂದರಿದು….
ನನಗೆ ನಿದ್ದೆ ಬಂದಿದೆ.
             
ಅವನನ್ನು ನಾನು ಎಷ್ಟುಬೇಕಾದರೂ ಆಡಿಸಬಹುದು.  ಅವನನ್ನು ನಾನು ಎಲ್ಲಿ ಬೇಕಾದರೂ ಸುತ್ತಿಸಬಹುದು. ಅವನೇ ನನ್ನ ಬಗ್ಗೆ ಹಾಡಿಕೊಂಡಿದಾನೆ… ನನ್ನನ್ನು ಹೇಗಾದರೂ ಅನ್‌ಡ್ರೆಸ್ ಮಾಡಿ ಎಲ್ಲಾದರೂ ಮುತ್ತಿಡಬಹುದು ಅಂದ್ಕೊಂಡಿದಾನೆ.  ಅದಕ್ಕೆ ನಾನೂ ಅವಕಾಶ ನೀಡಿದೇನೆ, ನಿಜ.
ಇವತ್ತು ಅವನಿಗೆ ಹೇಳಿಬಿಡಬೇಕು……. ಮೂರು ತಿಂಗಳುಗಳಿಂದ ನನ್ನನ್ನು ಹ್ಯಾಗೆ ಕಾಡಿದಾನೆ…. ನನ್ನ  ನಖಶಿಖಾಂತ ಹರಡಿಕೊಂಡಿದಾನೆ….. ನನ್ನ ಎಲ್ಲ ಅಂತಃಕರಣದ ಬಿಂದುವಾಗಿ ಹೋಗಿದಾನೆ….
ಅಸಾಮ್‌ನಿಂದ ನಿನ್ನೆ ತಾನೇ ಬಂದಿದಾನೆ. ಒಂದು ವಾರ ಅವನಿಲ್ಲದೆ ನಾನು ಎಷ್ಟು ಸೋತುಹೋದೆ….. ಅವನ ಸ್ನೇಹದ ಮಾತಿಲ್ಲದೆ ನಾನು ಎಷ್ಟು ಮೂಡ್ ಕೆಡಿಸಿಕೊಂಡೆ……..
`ನೀನೇ ನನ್ನ ಬಾರ್ಬೀ ಗರ್ಲ್ ಕಣೆ' ಎಂದು ಆತ ಒಮ್ಮೆ ನನಗೆ ಮುತ್ತಿಟ್ಟಿದ್ದಾನೆ. ನಾನು ಸುಮ್ಮನೆ ನಗುತ್ತ ಅವನ ಮುಖವನ್ನು ಬದಿಗೆ ಸರಿಸಿದ್ದೇನೆ. ನನ್ನ ತುಟಿಯನ್ನು ಕಚ್ಚೋದಕ್ಕೆ ಅವನಿಗೆ ಧೈರ್ಯ ನೀಡಿದ್ದೂ ನಾನೇ.
ನನಗೆ ಅವತ್ತೇ ಅವನು ಹೇಳಿದ್ದ – `ಈ ಪ್ರೀತಿಗೂ ಸ್ಪರ್ಶ ಇರುತ್ತೆ ಕಣೆ. ಬರೀ ಮಾತಿನಿಂದ ಪ್ರೀತಿ ಬೆಳೆಯಲ್ಲ. ಅಥವಾ ಸ್ಪರ್ಶವೊಂದೆ ಇದ್ದರೂ ಪ್ರೀತಿ ಬೆಳೆಯೋದಿಲ್ಲ. ಸ್ಪರ್ಶದ ಹಿತದಲ್ಲಿ ಪ್ರೀತಿ ಹೇಗೆ ಬೆಚ್ಚಗೆ ಅರಳಿಕೊಳ್ಳು&a
mp;#
3236;್ತದೆ ಎಂಬುದನ್ನು ಅನುಭವಿಸಿಯೇ  ತಿಳಕೋಬೇಕು.'
`ಹೌದೇನ್ರಿ… ಹೌದೇನೋ….. ಹಾಗಂತ ಯಾರೋ ಹೇಳಿದ್ದು……..?' ನಾನು ಮತ್ತೆ ಅವನನ್ನು ಕೆಣಕುತ್ತ  ಕೇಳಿದ್ದೆ. ಎಷ್ಟೋ ಸಲ ಹೀಗೆ ಬಹುವಚನ, ಏಕವಚನ ಬಳಸಿ ಮಾತಾಡಿ ಅವನಿಗೆ ಕುತೂಹಲ ಹುಟ್ಟಿಸಿದ್ದೇನೆ.
ಅವತ್ತು ನನ್ನ ತೋಳನ್ನು ಹಾಗೆಯೇ ಬಳಸಿ ಗೇರ್ ಬದಲಿಸಿದ್ದ.  ನಾನು ತಣ್ಣಗೆ ಅವನ ಅಂಗೈಯನ್ನು ತಟ್ಟುತ್ತ ಮುಂದೆ ನೋಡುತ್ತಿದ್ದೆ. ಅರೆತೆರೆದ ನನ್ನ ತುಟಿಯಲ್ಲಿ ಎಂಥದೋ ಪ್ರಶ್ನೆಗಳು ಬಂದು ಕೂತಂತೆ  ಆತ ಕಣ್ಣರಳಿಸಿದ್ದ…
ಅವನಿಗೆ ಯಾಕೆ ನನ್ನ ಮೇಲೆ ಇಂಥ ಮೋಹ… ಅವನಿಗೆ ಯಾಕೆ ನಾನು ಕಂಡರೆ ಅಷ್ಟೆಲ್ಲ ಇಷ್ಟ….
ನಾವು ದೊಡ್ಡ ಆಲದ ಮರದ ಕೆಳಗೆ ಕೂತಿದ್ದೆವು. ಅಲ್ಲಿ ಮಂಗಗಳನ್ನು ಕಂಡು ಬೆದರಿದ್ದೆವು. ಅಲ್ಲಿಂದ ನಾವು ಮೈಸೂರು ರಸ್ತೆಯ ಐರಾವತ ಹೋಟೆಲಿನಲ್ಲಿ ಕಟ್‌ಲೆಟ್ ತಿಂದಿದ್ದೆವು. ಖಾಲಿ ಬಿದ್ದ ಆ ಹೋಟೆಲಿನಲ್ಲಿ ಜರಾ ಜರಾ ಹಾಡು ತುಂಬಿಕೊಂಡಿತ್ತು.
`ಪ್ರೀತಿಯಲ್ಲಿ ಸ್ಪರ್ಶ ಇದ್ರೆ ಅದು ಸೆಕ್ಸ್ ಆಗಲ್ವ ಸರ್?' ನಾನು ಮತ್ತೆ ನನ್ನೆಲ್ಲ ಸಂಕೋಚವನ್ನು ಬದಿಗಿಟ್ಟು ಪ್ರಶ್ನಿಸಿದ್ದೆ.
`ಹಾಗಂತ ಲವ್ ಮಾಡೋರೆಲ್ಲ ಮೈ ಮುಟ್ಕಳಲ್ವೇನೆ?' ಮತ್ತೆ ತುಂಟತನದ ಉತ್ತರವನ್ನೇ ಆತ ಕೊಟ್ಟಿದ್ದ.
ಅವತ್ತು ಕಾಮಾಖ್ಯದಿಂದ ವಾಪಸು ಬರೋವಾಗ  ಆತ ಮುಖದಲ್ಲಿ ಯಾವುದೇ ಭಾವ ತೋರಿಸಿಕೊಳ್ಳದೆ ಹೇಳಿದ್ದ: `ಸೆಕ್ಸ್ ಅಂದ್ರೆ  ಬರೀ ಮುಟ್ಕೊಳ್ಳೋದಷ್ಟೆ ಅಲ್ಲ ಕಣೆ. ಅಥ್ವಾ ಪ್ರೀತಿ ಅಂದ್ರೆ ಅದು ಕೇವಲ ಮನಸ್ಸಿಂದು ಮಾತ್ರ ಆಗೋದೂ ಇಲ್ಲ. ಆದ್ರೆ ಬರೀ ಸೆಕ್ಸ್ ಇಲ್ಲ ಅಂತ ನಾನೇನೂ ಹೇಳಲ್ಲ. ದೇಹದ ಸ್ಪರ್ಶ ಇಲ್ಲದ ಪ್ರೀತಿ ಇರಲ್ಲ ಅಂತಷ್ಟೆ ನಾನು ಹೇಳ್ತೀನಿ. ನಿಂಗೆ ಇವೆಲ್ಲ ಅರ್ಥ ಆಗಿದೆಯೋ ಇಲ್ವೋ ನಂಗೊತ್ತಿಲ್ಲ. ಅಥವಾ ನಾನೇ ಹೆಜ್ಜೆ ಮೀರಿ ಬೇಡದ ವಿಚಾರಾನೆಲ್ಲ ನಿನ್ನೊಳಗೆ ತುಂಬ್ತಾ ಇರಬಹುದು. ಹಾಗೇನಾದ್ರೂ ಅನ್ನಿಸಿದ್ರೆ ದಯಮಾಡಿ ಇನ್ನು ಮುಂದೆ ನನ್ನ ಹತ್ರ ಬರಬೇಡ. ನಾವಿಬ್ರೂ ಪರಸ್ಪರ ಕಾಣಿಸಿಕೊಳ್ಳದೇನೇ ಚೆನ್ನಾಗಿರಬಹುದು'…
ನಾನು ಸಣ್ಣಗೆ ಅಳತೊಡಗಿದ್ದೆ. ಜುಮುರುಮಳೆಯಲ್ಲಿ &amp
;#32
40;ನ್ನ ಕಣ್ಣೀರೇನೂ ಅಂಥ ದೊಡ್ಡ ಮಬ್ಬಿಗೆ ಕಾರಣವಾಗಿರಲಿಲ್ಲ. ಆತ ವೈಪರ್ ಹಾಕಿರಲಿಲ್ಲ. ಕಾರು – ಸ್ಕೂಟರ್-ಬೈಕ್‌ಗಳ ಕೆಂಪು ದೀಪಗಳು ವಿಂಡ್‌ಸ್ಕ್ರೀನ್ ತುಂಬಾ ಹರಡಿಕೊಂಡಿದ್ದವು. ಹನಿಗಳು ಗಾಜಿನ ಮೇಲೆ ಜಾರುತ್ತ ಬೆಳಕಿನ ಕಿರಣಗಳು  ಹ್ಯಾಗಾಗೋ ಛಿದ್ರವಾಗಿದ್ದವು.
`ಈ ಹುಡುಗ ಕೆಂಪುದೀಪದಲ್ಲಿ ಎಷ್ಟು ಛಂದ ಕಾಣಿಸ್ತಾನಪ್ಪಾ…' ನಾನು ಅವನನ್ನೇ ನೋಡುತ್ತ ಕಣ್ಣೊರೆಸಿಕೊಂಡೆ…… ಅವನನ್ನು ಹಾಗೆಯೇ ನೋಡುತ್ತ ಕೂತಿರಬೇಕೇನೋ ಎಂಬ ಸಂಭ್ರಮದಲ್ಲಿ ಕೂತಿದ್ದೇನೆ. …… ಎಲ್ಲೂ ಟುವೀಲರನ್ನೇ ಓಡಿಸದವಳು ಇಲ್ಲಿ ಇವನ ಜೊತೆ ಐಶಾರಾಮಿ ಫೋರ್ಡ್ ಕಾರಿನಲ್ಲಿ  ಕೂತಿದ್ದೇನೆ. ಸಿಡಿ ಪ್ಲೇಯರ್‌ನಿಂದ ಮೆಲ್ಲನೆ ಭಾವಗೀತೆಗಳು ನನ್ನ ಸುತ್ತ ಗಿರಕಿ ಹೊಡೆಯುತ್ತಿವೆ.
ನಾನು ಇವನಿಗೆ  ಯಾಕೆ ಹೀಗೆ ಸೋಲುತ್ತಿದ್ದೇನೆ…
ಆತನಂತೂ ಅವನ ಮಾಡೆಲ್ ಗೆಳತಿಯ ಬಗ್ಗೆ, ಅವಳ ಜೊತೆ ಕಳೆದ ರಾತ್ರಿಗಳ ಬಗ್ಗೆ ಎಷ್ಟೋ ಸಲ ಹೇಳಿದ್ದನ್ನು ನೋಡಿದರೆ ಅವನಿಗೆ ನನ್ನ ಮೇಲೆ ಕೇವಲ ಸ್ಪರ್ಶಪ್ರೀತಿ ಮಾತ್ರವೇ ಇದೆಯೇ ಅಂತ ಅನ್ನಿಸಿದ್ದೂ ಇದೆ. ಆದರೆ ಒಂದು ಸಲ ರಿಂಗ್ ರಸ್ತೆಯಲ್ಲಿ  ಆತ ತನ್ನ ಮಾಡೆಲ್ ಗೆಳತಿಯ ಭಯಾನಕ ಅನುಭವಗಳನ್ನು ಹೇಳುತ್ತ… ಅವಳನ್ನು ತಾನು ಹೇಗೆ ಪ್ರೊಟೆಕ್ಟ್ ಮಾಡಿದೆ ಎಂದು ಹೇಳುತ್ತ ಅಳೋದಕ್ಕೇ ಶುರು ಮಾಡಿದ್ದ. ನಾನು ಎಷ್ಟು ಗಾಬರಿಯಾಗಿ…. `ನೀನು ಹೀಗೆ ಅತ್ರೆ ನಾನು ಕಾರಿಂದ ಇಳಿದೇ ಬಿಡ್ತೇನೆ' ಎಂದಿದ್ದೆ. ಆದ್ರೂ ….
ಅವನನ್ನು ಹಾಗೇ ಭುಜಕ್ಕೆ ಒರಗಿಸಿಕೊಂಡು ಕೂತಿದ್ದೆ. ಪಕ್ಕದಲ್ಲಿ ಕಾರುಗಳು ಭರಭರನೆ ಹೋಗುತ್ತಿದ್ದವು. ಯಾರೂ ನಮ್ಮನ್ನು ಅಷ್ಟಾಗಿ ಗಮನಿಸುವುದೇ ಇಲ್ಲ. ಮನೆಗೆ ಹೋಗೋದಕ್ಕಿಂತ ಈ ಕಾರೇ ವಾಸಿ.
ಎಷ್ಟೋ ಸಲ ಆತ `ನಿನ್ನ ಜೊತೆ ನಾನು ಒಂದು ದಿನವಿಡೀ ಕಳೀಬೇಕು ಕಣೆ' ಎಂದಿದ್ದ.
`ಆದ್ರೆ ಲಾಡ್ಜ್ ಗೀಡ್ಜ್ ಅಂತೆಲ್ಲ ಹೇಳಬೇಡಿ ಮತ್ತೆ… ಅದೆಲ್ಲ ನನಗೆ ಹಿಡಿಸಲ್ಲ. ಖಂಡಿತಾ ನಾನು ಲಾಡ್ಜ್‌ಗೆ ಬರಲ್ಲ' ಎಂದಿದ್ದೆ. `ಹೌದೆ.. ನಿನ್ನನ್ನು ಲಾಡ್ಜ್‌ಗೆ ಕರ್‍ಕೊಂಡು ಹೋಗ್ಬೇಕು ಅಂತ ಸಂಚು ಹಾಕಿದೀನಾ.. ನನ್ನ ಫ್ರೆಂಡ್‌ಕಥೆ &
amp;
#3257;ೇಳಿದ್ದು ಸುಮ್ನೆನಾ?' ಎಂದು ಮುಖ ಕುಗ್ಗಿಸಿದ್ದ.
ಅವತ್ತು ನಾವು ಮೋನೋಟೈಪ್ ದಾಟಿ ಸುಚಿತ್ರಾ ಥಿಯೇಟರ್ ಹತ್ತಿರ ಹೋಗುತ್ತಿದ್ದೆವು. ನಿನಗೊಂದು ಪ್ರಶ್ನೆ ಕೇಳಲಾ ಎಂದು ನಾನು ಅವನಿಗೆ ಕೇಳಿ ಎಷ್ಟೋ ಹೊತ್ತಾಗಿತ್ತು. ಕೇಳು.. ಆದ್ರೆ ನೀನು ಕೇಳೋದೇನು ಅನ್ನೋದು ನಂಗೊತ್ತು ಎಂದು ಆತ ಕಣ್ಣೋಟವನ್ನೂ ಬೀರದೆ ಹೇಳಿದ್ದ. ನಾನು ಮತ್ತೆ ಸೀಟಿಗೆ ಆರಾಮಾಗಿ ಒರಗಿಕೊಂಡು ಅವನ್ನೇ ನೋಡಿದೆ.
ನನ್ನ ಮೈಂಡ್‌ರೀಡಿಂಗ್ ಗೊತ್ತಿದೆಯ?  ಏನೋ… ನಾನು ಅತ್ತ ಇತ್ತ ಹೊರಳುತ್ತಿದ್ದೆ.
`ನೀನು ಪ್ರಶ್ನೆ ಕೇಳ್ದೇ ಇದ್ರೆ ನಾನೂ ಆ ಪ್ರಶ್ನೇನ ಇಲ್ಲಿ ಕೇಳಿಬಿಡ್ತೀನಿ….' ಮೆತ್ತಗೆ ಬೆದರಿಸುತ್ತಿದ್ದಾನೆ..
ಏಳೂವರೆ ಆಗ್ತಾ ಇದೆ. ಮನೆಗೆ ಹೋಗಬೇಕು.
`ರಾಧಿಕಾ  ಜೊತೆ  ಕೂಡೋವಾಗ ನಾನು ನೆನಪಾಗ್ತೀನಾ?'
`…..'
`ಬೇಜಾರಾಯ್ತಾ ನನ್ನ ಪ್ರಶ್ನೆ ಕೇಳಿ… ಹಂಗಾದ್ರೆ ಇಲ್ಲೇ ನಿಲ್ಸಿ ನಾನು ಇಳ್ಕೊಂಡು ಬಿಡ್ತೀನಿ….'
`ನಿನ್ನ ಪ್ರಶ್ನೆಯನ್ನು ನಾನು ಬೇರೆ ಥರ ಊಹಿಸಿದ್ದೆ…… ನನ್ನನ್ನು ಕೂಡಬೇಕು ಅಂತ ನಿಮಗೆ ಅನ್ಸುತ್ತಾ ಅಂತ ನೀನು ಕೇಳ್ತೀಯೇನೋ ಅಂದುಕೊಂಡಿದ್ದೆ….'
`ಅಲ್ವೋ.. ಉತ್ತರ ಹೇಳೋ…' 
ಆತ ಹೇಳ್ತಾನೇ ಇದಾನೆ….
`ನೋಡು ನಿನ್ನ ಸ್ಪರ್ಶಮಾತ್ರಕ್ಕೆ ನಾನು ನಿನ್ನ ದೇಹವನ್ನೆಲ್ಲ ಬೇಡುವಂಥ ಮನುಷ್ಯನಾಗಿ ರೂಪಾಂತರವಾಗಲ್ಲ. ನಿನ್ನ ಸ್ಪರ್ಶದಿಂದ ನನಗೆ ಹಿತವಿದೆ. ಆದ್ರೆ ರಾಧಿಕಾ ಬಗ್ಗೆ  ಮಾತಾಡ್ತಾ ನಾನೇ ಎಷ್ಟು ಸಲ ನಿನ್ನ ಹತ್ರ ಅತ್ತಿದೇನೆ… ನನಗೆ ನಿನ್ನಿಂದ ಬೇಕಾಗಿರೋದು ಬರೀ ಪ್ರೀತಿ ಕಣೆ… ನೀನು ಚಿತ್ರದುರ್ಗದ ಹುಡುಗನ್ನ ಎಷ್ಟೆಲ್ಲ ಲವ್‌ಮಾಡ್ತೀಯ ಅನ್ನೋದು ನನಗೆ ಗೊತ್ತು…
`ನನ್ನ ಹುಡುಗಿ ಈಗ ಸಿಕ್ಕಿದಾಳೆ. ಅವಳಿಗೂ ದೂರವಾಗಿರೋದಕ್ಕೆ ಯಾವುದೋ ಕಾರಣವಿತ್ತು. ಈಗ ನಾನು ಅವಳು ಎಷ್ಟೋ ರಾತ್ರಿಗಳನ್ನು ಕೂಡಿದ್ದೇವೆ. ಆದ್ರೆ  ಅಂಥ ಯಾವುದೇ ಕ್ಷಣದಲ್ಲೂ ಅವಳ ಬದಲು ನೀನು ಇದ್ರೆ ಅಂತ ಒಂದ್ಸಲವೂ ಅನ್ನಿಸಿಲ್ಲ ಕಣೆ….. ನೀನು ನಂಬು ಬಿಡು… ನಿಂಗೇ ಬಿಟ್ಟಿದ್ದು….. ಅಸಾಮಿನಲ್ಲಿ ಅವಳನ್ನು ಹ್ಯಾಗೆ ಮುದ್ದು ಮಾಡ್ದೆ ಗೊತ್ತ….. ಬಾನ್ಸುರಿ &
amp;
#3257;ುಡುಕ್ತಾನೇ ಅವಳನ್ನೂ ಶೋಧಿಸಿದ್ದು ಅವಳಿಗೆ ಗೊತ್ತಾಗಿಲ್ಲ……
ಅವನು ಮೊದಲ ಸಲ ನನ್ನ ಜೊತೆ ಮಾತಾಡಿದಾಗ, ನನ್ನ ಗ್ರಾಫಿಕ್ ಕೆಲಸಗಳಿಗೆ ಅವನು ಸಲಹೆ ನೀಡುವಾಗ ನಾವು ಇಷ್ಟು ಹತ್ತಿರ ಕೂತುಕೊಳ್ಳುತ್ತೇವೆ ಎಂದು ಭಾವಿಸಿರಲಿಲ್ಲ. ಬೆಂಗಳೂರಿನ ಸೀದಾ ಸಾದಾ ಗ್ರಾಫಿಕ್ ಡಿಸೈನರ್ ಆದ ನನಗೆ ಅವನು ಯಾಕಾದರೂ ಸೋಲಬೇಕು… ನಾನಾದ್ರೂ ಯಾರು? ಡಿಗ್ರಿ ಮುಗಿಸಿ ಒಂದು ಕೆಲಸ ಅಂತ ಈ ಫೀಲ್ಡಿನಲ್ಲಿದೇನೆ. ಕೋರೆಲ್ ಡ್ರಾ, ಫೋಟೋಶಾಪ್‌ನಲ್ಲಿ ಸುಮಾರಾಗಿ ಕೆಲಸ ಮಾಡ್ತೇನೆ. ಅವನು ಸಲಹೆಗಾರನಾಗಿ ಸೇರಿದಾಗ ಮೊದಲು ವಿರೋಧಿಸಿದ್ದೇ ನಾನು. ಹಾಗಂತ ನಾನೇ ಮೊದಲು ಕಾರಿನಲ್ಲಿ ಕೂತ ಕ್ಷಣಗಳಲ್ಲೇ ಬಿಚ್ಚಿಟ್ಟಿದ್ದೆ.
`ಈ ಕಾರೇ ನಮ್ಮ ಬದುಕು ಅಂತ ಕಾಣ್ಸುತ್ತೆ.. ಈ ನಾಲ್ಕು ಗಾಲಿಗಳ  ಒಳಗೆ ಕೂತು ನಾವು ಹೇಗೆಲ್ಲ ಇರಬಹುದೋ ಅಷ್ಟೇ ನಮ್ಮ  ನಡುವೆ ನಡೆಯೋ ಘಟನೆಗಳು ಅನ್ಸುತ್ತೆ… ನೋಡು ಮಾರಾಯ್ತಿ…  ಎಂದೂ ಈ ಕಾರಿನ ಹೊರಗೆ ನಾವು ಓಡಾಡಬಹುದು…. ಕೈ ಹಿಡಿದುಕೊಂಡು ನಡೆದಾಡಬಹುದು ಅಂತ ತಿಳ್ಕೋಬೇಡ… ಈ ಕಪ್ಪುಗಾಜಿನ ಒಳಗೆ ನಮ್ಮ ಸುಖ ದುಃಖ ಎಲ್ಲವೂ  ಇರ್‍ಲಿ…. '
             
`ಒಂದು ಮಾತು ಹೇಳ್ಲಾ?'
`ಒಂದು ಯಾಕೆ….. ಹತ್ತು ಹೇಳು….. ಕೇಳೋದೇ ನನ್ನ ಕೆಲಸ ಅಲ್ವ?'
ಮತ್ತೆ ಮತ್ತೆ ಅವನಿಗೆ ಮೊಬೈಲ್ ಕಾಲ್ ಬರ್‍ತಾ ಇದೆ. ಯಾರಿಗೋ  ಮೀಟಿಂಗ್ ಬಗ್ಗೆ ಹೇಳ್ತಾ ಇದಾನೆ…
ಕೊನೆಗೆ ರಸ್ತೆ ಬದಿಯಲ್ಲಿ ಅಗಲವಾದ ಜಾಗ ಸಿಕ್ಕಿದ ಕೂಡಲೇ ಕಾರು ನಿಲ್ಲಿಸಿ ಗಾಜನ್ನೂ ಏರಿಸದೇ ಸೀದಾ ನನ್ನ ಅಪ್ಪಿ ಹಿಡಿದು ಮುತ್ತು ಕೊಟ್ಟ.
`ನೋಡು ಈ ಮುತ್ತಿನಿಂದ್ಲೇ ನಿನ್ನ ಮಾನ ಹೋಗುತ್ತೆ ಅಂತ ಅನುಮಾನಾನ?'
`ಹಾಗೇನಿಲ್ಲ ಅಂತ ಎಷ್ಟು ಸಲ ಹೇಳಿಲ್ಲಾರಿ…… ಇದೇನು ಮೊದಲ್ನೇ ಸಲಾನ ನೀವು ಮುತ್ತು ಕೊಡ್ತಿರೋದು….'
`ನಂಗೆ ಹೀಗೆ ಮುತ್ತು ಕೊಡೋವಾಗೆಲ್ಲ ಅನ್ನಿಸುತ್ತೆ… ನಿಂಗೆ ನಾನು ಯಾಕೆ ಮುತ್ತು ಕೊಡ್ತೀನಿ… ಯಾಕೆ ನಂಗೆ ಯಾವಾಗ್ಲೂ ನಿನ್ನ ತುಟಿ ಇಷ್ಟ ಆಗುತ್ತೆ… ನಂಗೊತ್ತಿಲ್ಲ ಕಣೆ.. ಸಾರಿ.. ನಿಂಗೆ ಬೋರ್ ಹೊಡಿಸ ಇದೀನಿ….'
ಈ ಮಾತು, ಎಷ್ಟೋ ಸಲ ನಡೆದಿದೆ….   ಪ್ರತೀ ಸಲ ಹೀಗೆ ನನ&
#327
7;ನನ್ನ ಸೀಟಿನಿಂದ ಎಳೆದು ಮುತ್ತು ಕೊಡುವಾಗಲೂ ಹೀಗೆ ಗಿಲ್ಟಿ ಫೀಲಿಂಗ್ ಇರುತ್ತೆ ಇವನಿಗೆ….
`ನಾನು ಸ್ವಲ್ಪ ಯೋಚನೆ ಮಾಡೋದಕ್ಕೆ ಸಮಯ ಕೊಡು ಮಾರಾಯ…. ಬರೀ ತುಟಿ ಕಚ್ಚೋದೇ ಆಯ್ತಲ್ಲಪ್ಪ….'
ನಾನು ಏನು ಹೇಳ್ತೀನಿ ಅನ್ನೋ ಕುತೂಹಲ ಅವನಿಗಿದೆ.
`ಸರಿ.. ನಾನು  ಎರಡು ಕಾಲ್ ಮಾಡ್ಬೇಕು..  ಅಲ್ಲೀವರೆಗೆ ಎಷ್ಟು ಬೇಕಾದ್ರೂ  ಯೋಚಿಸು….. ಆಮೇಲೆ  ಸುಮ್ನೆ ಕೂತ್ರೆ ನೋಡು….'
ಅವನು ಎದ್ದು  ಕಾರಿನ ಹಿಂದೆ ಹಿಂದೆ ನಡೆದಿದಾನೆ. ಕನ್ನಡಿಯಲ್ಲಿ ಅವನ ಚಿತ್ರ ಚಿಕ್ಕದಾಗ್ತಾ ಇದೆ.
ಅವನ ಮಾಡೆಲ್ ಫ್ರೆಂಡ್, ಅವನ ಎಲ್ಲ ಗೆಳೆಯರು, ಅವನ ಅಪ್ಪ, ಅಮ್ಮ, ಅವನ ಅಕ್ಕ, ಅವನ ತಮ್ಮ – ಎಲ್ಲರನ್ನೂ ಅವನು ಹೀಗೆ ಬಿಟ್ಟು ಬಂದಿರ್‍ತಾನೆ. ನನ್ನ ಅಜ್ಜ, ಅಜ್ಜಿ, ನನ್ನ ಅಮ್ಮ, ನನ್ನ ತಮ್ಮ, ನನ್ನ ತಂಗಿ – ಎಲ್ಲರನ್ನೂ ಬಿಟ್ಟು ನಾನು ಹೀಗೆ ಅವನ ಕಾರಿನಲ್ಲಿ ಸೇರಿಕೊಳ್ತೇನೆ.
ಇದೊಂಥರ ಕಾರ್ ಮನ ಆಗಿದೆ ಕಣೇ ಅಂತ ಅವನು ಎಷ್ಟು ಸಲ ನಕ್ಕಿದಾನೆ. ಇಲ್ಲೇ ಡಿಕ್ಕಿಯಲ್ಲಿ ಸ್ಟೌವ್ ತಂದಿಡು… ಬೋರ್‌ವೆಲ್ ಲಾರಿ ಕಾರ್ಮಿಕರ ಥರ ನಾವೂ ದೊಡ್ಡ ಆಲದಮರಕ್ಕೆ ಹೋಗಿ ಅಡುಗೆ ಮಾಡ್ಕೊಂಡು ತಿನ್ನೋಣ ಅಂದಿದೇನೆ.
ಈ ಕಾರಿನಲ್ಲಿ ಹೀಗೆ ಮಾತುಗಳಿಲ್ಲದೆ, ಅವನೂ ಇಲ್ಲದೆ ಕೂತುಗೊಳ್ಳೋದು ಎಷ್ಟು ಕಷ್ಟ… ಹಿಂದೆ ಅವನ ಲ್ಯಾಪ್‌ಟಾಪ್ ಸುಮ್ಮನೆ ಬಿದ್ದುಕೊಂಡಿದೆ….
ಅವನು ಬಂದು ಕೂತ.
`ಅವತ್ತು ನಾನು ನಿಮ್ಮ ಕಾರಿಂದ ಇಳಿದಿದ್ದನ್ನು ನನ್ನ ಚಿಕ್ಕಪ್ಪ  ನೋಡಿದಾರೆ……..'
`ಅಂದ್ರೆ ನಮ್ಮ ಭೇಟಿ ಇವತ್ತಿಗೇ ಕೊನೇನ?
`ಹಾಗಲ್ವೋ….. ಸ್ವಲ್ಪ ಕಡಿಮೆ ಮಾಡ್ಕೊಳ್ಳಣ ಅಂತ….. '
`ಓಕೆ. ಓಕೆ…… ಇವತ್ತಿಗೇ ಕೊನೆ. ನಿನ್ನ ಮದ್ವೆ ಇನ್ವಿಟೇಶನ್ ಕೊಡ್ತಿಯಾ ಹ್ಯಾಗೆ?'
`ಅದನ್ನೇ ಹೇಳೋದಕ್ಕೆ ಬಂದಿದ್ದು…. ನಾನು ಚಿತ್ರದುರ್ಗದ ಹುಡುಗನನ್ನ ಬಿಟ್ಟೆ…… ಯಾಕೋ ಅವನು ತುಂಬಾ ಇಮ್ಮೆಚೂರ್ ಅನ್ನಿಸ್ತಿದೆ….. ನಿಂಜೊತೆ ಇದ್ದೂ ಇದ್ದೂ ಹಾಗನ್ನಿಸಿದೆಯೋ ಏನೋ…. ಗೊತ್ತಿಲ್ಲ' ಅಬ್ಬ… ಅಂತೂ ಹೇಳಿದೆ….
ಅವನು ಸುಮ್ಮನೆ ಕುಳಿತಿದ್ದ….
`ನೋಡು… ನಿಂಥರ ಒಬ್ಬ ಗಂಡ ನನಗೆ ಬೇಕು…. ನೀನಾಗಲ್ಲ ಆಂತ ನಂಗೊತ್ತು… ಅದಕ್ಕೇ ಇವತ್ತೇ ಕೊ&a
mp;#
3240;ೆ. ನಿನ್ನಂಥವನನ್ನ ಹುಡುಕಿದ ಮೇಲೆ ನಿನ್ನನ್ನೂ ಮರೀತೇನೆ. ಅವನ ಸ್ಪರ್ಶದಲ್ಲೇ ಉಳಿದ ಎಲ್ಲಾ ಬದುಕನ್ನೂ ಕಳೀತೇನೆ……. ಸ್ಪರ್ಶಸುಖ ಕೊಟ್ಟಿದೀಯ….. ಏನು ಹೇಳ್ಲಿ ಹೇಳು…. ನಂಗೂ ನೀನೇ ನನ್ನ ಗಂಡ ಆಗ್ಲಿ ದೇವ್ರೇ ಅಂತ ಅನ್ಸುತ್ತೆ…. ಹಾಗೇನೂ ಆಗಲ್ಲ ಅಂತಾನೂ ಗೊತ್ತು ಕಣೋ…… ಇರ್‍ಲಿ ಬಿಡು… ನಿಮ್ಗೆ ಬೇಜಾರಾಯ್ತೇನೋ….'
ಅವನು ಸುಮ್ಮನೆ ಮೊಬೈಲ್‌ನ್ನೇ ಉಜ್ಜುತ್ತಿದ್ದಾನೆ…. ನಾನು ಕಾರಿನಿಂದ ಇಳಿದು ಅವನನ್ನು ನೋಡಲೂ ಹೋಗದೆ ಸರಸರ ಬಸ್‌ಸ್ಟಾಪಿನತ್ತ ಹೆಜ್ಜೆ ಹಾಕಿದೆ…  ಕಾರು ರಿವರ್ಸ್ ತಿರುಗಿ ಬೆಂಗಳೂರಿನತ್ತ ನಿಧಾನವಾಗಿ ಹೋಗ್ತಾ ಇದೆ….
ಬಸ್ ನಂಬರುಗಳೆಲ್ಲ ಮರೆತೇ ಹೋಗಿದೆಯಲ್ಲ ಅನ್ನಿಸ್ತಿದ್ದ ಹಾಗೆಯೇ ಕೆ.ಆರ್.  ಮಾರ್ಕೆಟ್ ಬೋರ್ಡ್ ನೋಡಿ ಹತ್ತಿದೆ…. ನೀರಿನ ಬಾಟಲಿ ಇಲ್ಲ ಅನ್ನೋದನ್ನು ಬಿಟ್ರೆ….. ಅಂಥ ಬದಲಾವಣೆ ಏನೂ ಇಲ್ಲ.  ಕೊನೇಪಕ್ಷ ಎಂಟಕ್ಕಾದ್ರೂ ಮನೆ ಸೇರಬಹುದು.
             
ಮುಗಿಯಿತು

Leave a Reply

Your email address will not be published. Required fields are marked *

nineteen − 2 =

This site uses Akismet to reduce spam. Learn how your comment data is processed.