ಪುಸ್ತಕ ಭಂಡಾರಗಳು

ಪುಸ್ತಕಗಳು ಎಂದಕೂಡಲೇ ಪುಟ್ಟ ಮಕ್ಕಳು ಕಣ್ಣು ಹಾಯಿಸುತ್ತಾರೆ. ಮನೆಯ ಹೆಣ್ಣುಮಕ್ಕಳು ತಮಗೆ ಬೇಕಾದ ಮಾಹಿತಿ ಇದೆಯೆ ಎಂದು ಪುಟ ತಿರುಗಿಸುತ್ತಾರೆ. ಹಿರಿಯರು ಕಾಲಕ್ಷೇಪಕ್ಕೆಂದು ಹಲವು ಪುಸ್ತಕಗಳನ್ನು ಸಂಗ್ರಹಿಸುತ್ತಾರೆ. ಇಂಥ ನೂರಾರು, ಸಾವಿರಾರು ಪುಸ್ತಕಗಳು ಇದ್ದರೆ? ಹಾಗೆ ವಿವಿಧ ವಿಷಯಗಳ ಮೇಲೆ ನೂರಾರು ಪುಸ್ತಕಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗಾಗಿ ಮುಕ್ತವಾಗಿರುವ ವ್ಯವಸ್ಥೆಯ್ನೇ ಪುಸ್ತಕ ಭಂಡಾರ ಎಂದು ಕರೆಯುತ್ತಾರೆ. 

ಪುಸ್ತಕ ಭಂಡಾರ ಎಂದರೆ eನದಭಂಡಾರವೇ ಎನ್ನಬಹುದು. ಒಂದೇ ಸ್ಥಳದಲ್ಲಿ ಕುಳಿತು ಜಗತ್ತಿನ ಯಾವುದೇ ಮೂಲೆಯ ಮಾಹಿತಿಯನ್ನು, ಕಥೆಯನ್ನು, ಸ್ಥಳವಿಶೇಷವನ್ನು ತಿಳಿದುಕೊಳ್ಳುವ, ಅನುಭವಿಸುವ ಸಾಧ್ಯತೆ ಇರುವುದು ಪುಸ್ತಕಗಳಿಂದ ಮಾತ್ರ. ಅಲ್ಲದೆ ಪುಸ್ತಕಗಳು ನಮ್ಮ ನಾಗರಿಕತೆಯ ಅತಿ ಮಹತ್ವದ ಶೋಧವಾಗಿದೆ. ಸಾವಿರಾರು ವರ್ಷಗಳಿಂದ ಪುಸ್ತಕಗಳು ಹಸಸ್ತಪ್ರತಿಯಲ್ಲಾಗಲೀ, ಮುದ್ರಣದ ಮೂಲಕವಾಗಲೀ ಪ್ರಕಟವಾಗುತ್ತ ಬಂದಿವೆ.  ಈ ಪುಸ್ತಕಗಳು ಇರುವುದರಿಂದಲೇ ನಮ್ಮ ಜೀವನ ಹಿತವಾಗಿದೆ ಎಂದರೆ ತಪ್ಪಿಲ್ಲ. ಟೆಲಿವಿಜನ್, ರೇಡಿಯೋ, ಸಿನೆಮಾ, ಕಂಪ್ಯೂಟರ್ – ಯಾವುದೇ ಬಂದರೂ ಪುಸ್ತಕಗಳ ಮಹತ್ವವನ್ನು ಕುಗ್ಗಿಸಲಾಗಿಲ್ಲ. ಹಾಗೆ ನೋಡಿದರೆ ಈಗೀಗ ಕೆಲವು ಪುಸ್ತಕಗಳು ಕೋಟಿಗಟ್ಟಳೆ ಪ್ರತಿಯಲ್ಲಿ  ಮಾರಾಟವಾಗುತ್ತವೆ. 

ಪುಸ್ತಕಗಳ ಮುದ್ರಣದಲ್ಲಿ ಚೀನಿಯರು ಮುಂದಿದ್ದರೂ, ಕೊನೆಗೆ ಗುಟೆನ್‌ಬರ್ಗ್ ಎಂಬಾತ ಕಂಡುಹಿಡಿದ ಸುಲಭ ಮಾದರಿಯ ಮುದ್ರಣಾಲಯಗಳಿಂದಾಗಿ ಪುಸ್ತಕಗಳ ಪ್ರಕಟೆಯಲ್ಲಿ ಭಾರೀ ಕ್ರಾಂತಿ ಉಂಟಾಯಿತು ಎಂಬುದನ್ನು ಇಲ್ಲಿ ಮರೆಯುವಂತಿಲ್ಲ. 

ಇಷ್ಟಿದ್ದೂ ಹಲವರಿಗೆ ಬೇಕಾದ ಪುಸ್ತಕಗಳನ್ನು ಖರೀದಿಸಲು ಹಣದ ಕೊರತೆ ಇರುತ್ತದೆ. ಅಥವಾ ಪುಸ್ತಕವೇ ಸಿಗುವುದಿಲ್ಲ. ಎಲ್ಲರೂ ಎಲ್ಲಾ ಪುಸ್ತಕಗಳನ್ನು ಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದಲೇ ಪುಸ್ತಕ ಭಂಡಾರಗಳು ಅಸ್ತಿತ್ವಕ್ಕೆ ಬಂದಿವೆ. ಇಲ್ಲಿ  ಪರಸ್ಪರ ಹಂಚಿಕೆಯ ಮೂಲಕ, ಸಹಕಾರದ ಮೂಲಕ ಹಲವು ಪುಸ್ತಕಗಳನ್ನು ಎಲ್ಲರೂ ಓದಬಹುದು. ನಮ್ಮ ದೇಶದಲ್ಲಿ ನಲಂದಾ – ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ಬೃಹತ್ ಪ್ರಮಾಣದ ಅಪೂರ್ವ ಗ್ರಂಥಗಳಿದ್ದ ಪುಸ್ತಕ ಭಂಡಾರಗಳಿದ್ದವು ಎಂದು ಇತಿಹಾಸ ಹೇಳುತ್ತದೆ. ಕಾನ್‌ಸ್ಟಾಂಟಿನೋಪಲ್‌ನಲ್ಲಿ ಇದ್ದ ಗ್ರಂಥಾಲಯವನ್ನು ಆಕ್ರಮಣಕಾರರು ಸುಡಲು ವಾರಗಟ್ಟಳೆ ಕಾಲಾವ ಬೇಕಾಯಿತು. ಅಲ್ಲಿ ವಿಶ್ವದ ಅತ್ಯಂತ ಅಪೂರ್ವ ಪುಸ್ತಕಗಳಿದ್ದವಂತೆ. 

ಪುಸ್ತಕ ಭಂಡಾರಗಳಲ್ಲಿ ಮೂರು ಪ್ರಮುಖ ಪ್ರಕಾರಗಳನ್ನು ನಾವು ಕಾಣಬಹುದು. 

೧) ಸಾರ್ವಜನಿಕ ಗ್ರಂಥಾಲಯಗಳು 

೨) ಖಾಸಗಿ ಗ್ರಂಥಾಲಯಗಳು 

೩) ವಿದ್ಯಾರ್ಥಿ ಗ್ರಂಥಾಲಯಗಳು 

ಸಾರ್ವಜನಿಕ ಗ್ರಂಥಾಲಯಗಳನ್ನು ಸಾಮಾನ್ಯವಾಗಿ ರಾಜ್ಯ ಸರ್ಕಾರವು ಜಿಲ್ಲಾ ಕೆಂದ್ರಗಳಲ್ಲಿ, ತಾಲೂಕು ಕೇಮದ್ರಗಳಲ್ಲಿ ಸ್ಥಾಪಿಸಿರುತ್ತದೆ. ಇಲ್ಲಿ ದಿನಪತ್ರಿಕೆಗಳನ್ನು ತರಿಸುತ್ತಾರೆ. ನಿಯಮಿತವಾಗಿ ರಾಜ್ಯ ಸರ್ಕಾರದ ಗ್ರಂಥಾಲಯ ಇಲಾಖೆಯ ಶಿಫಾರಸು ಮಾಡಿದ ಹಲವು ಕನ್ನಡ ಪುಸ್ತಕಗಳನ್ನು ಕೊಳ್ಳಲಾಗುತ್ತದೆ. ಹೀಗಾಗಿ ಹಳೆಯ ಪುಸ್ತಕಗಳಿಂದ ಹಿಡಿದು ಹೊಸ ಪುಸ್ತಕಗಳೂ ಇಲ್ಲಿ ಸಾರ್ವಜನಿಕರಿಗೆ ಓದಲು ಸಿಗುತ್ತವೆ. ಈ ಗ್ರಂಥಾಲಯಗಳಿಗೆ ಯಾರಾದರೂ ಸದಸ್ಯರಾಗಬಹುದು. ಅವರಿಗೆ ಮೂರು ಪುಸ್ತಕಗಳನ್ನು ತಲಾ ಹದಿನೈದು ದಿನಗಳವರೆಗೆ ಕಾಲಾವ ನೀಡಿ ಮನೆಗೆ ತೆಗೆದುಕೊಂಡು ಹೋಗಲು ನೀಡುತ್ತಾರೆ. ಆ ದಿನಾಂಕದೊಳಗೆ ಪುಸ್ತಕಗಳನ್ನು ವಾಪಸು ಮಾಡಿ ಬೇರೆ ಪುಸ್ತಕಗಳನ್ನು ಒಯ್ಯಬಹುದು. 

ಈ ಗ್ರಂಥಾಲಯಗಳಲ್ಲಿ ಸದಸ್ಯರಾಗದೆ ಇರುವವರು ಅಲ್ಲಿಯೇ ಕುಳಿತು ಯಾವುದೇ ಪುಸ್ತಕವನ್ನಾದರೂ ಓದಬಹುದು; ನಿಯತಕಾಲಿಕೆಗಳ್ನು, ದಿನಪತ್ರಿಕೆಗಳನ್ನು ತೆರೆಯಬಹುದು. 

ಈ ಸಾರ್ವಜನಿಕ ಗ್ರಂಥಾಲಯಗಳ ಮೂಲಕವೇ ಸಂಚಾರಿ ಗ್ರಂಥಾಲಯಗಳೂ ನಡೆಯುತ್ತವೆ. ಅಂದರೆ ಒಂದು ಬಸ್ಸಿನಂಥ ದೊಡ್ಡ ವಾಹನದಲ್ಲಿ ಹಲವು ಪುಸ್ತಕಗಳನ್ನು ನಿರ್ದಿಷ್ಟ ಬಡಾವಣೆಯಲ್ಲಿ ನಿರ್ದಿಷ್ಟ ದಿನದಂದು ತೆಗೆದುಕೊಂಡು ಹೋಗುತ್ತಾರೆ. ಅಲ್ಲಿನ ನಿವಾಸಿಗಳು ಈ ಗ್ರಂಥಾಲಯದ ಪ್ರಯೋಜನ ಪಡೆಯಬಹುದು. 

ಹೀಗೆ ಸರ್ಕಾರಿ ಗ್ರಂಥಾಲಯಗಳು ನಮ್ಮ ರಾಜ್ಯದಲ್ಲಿ ಸಾಕಷ್ಟು ಸ್ಥಾಪನೆಗೊಂಡಿವೆ. ಆದರೆ ಇವುಗಳಲ್ಲಿ ಸಮಸ್ಯೆಯೂ ಇದೆ. ಪುಸ್ತಕಗಳನ್ನು ವಿಷಯಾನುಸಾರ ಇಟ್ಟಿರುವುದಿಲ್ಲ. ಬೇಕಾಬಿಟ್ಟಿಯಾಗಿ ಇಟ್ಟಿರುವ ಪುಸ್ತಕಗಳಿಂದ ನಮಗೆ ಬೇಕಾದ ಪುಸ್ತಕವನ್ನು ಹುಡುಕುವುದೇ ದೊಡ್ಡ ಕೆಲಸವಾಗಿ ಬೇಸರ ಹುಟ್ಟುತ್ತದೆ.  ಅಲ್ಲದೆ ಈ ಗ್ರಂಥಾಲಯಗಳಿಗೆ ಭೇಟಿ ನೀಡುವವರು ಪುಸ್ತಕಗಳನ್ನು ಕದಿಯುವುದು, ಹಾಳೆಗಳನ್ನು ಹರಿಯುವುದು ಮುಂತಾದ ದುಷ್ಕೃತ್ಯಗಳನ್ನು ಎಸಗುತ್ತಾರೆ. ಇದರಿಂದ ಬೇರೆ ಓದುಗರಿಗೆ ತೊಮದರೆಯಾಗುತ್ತದೆ ಎಂಬುದನ್ನು ಅವರು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಇದು ಸನ್ನಡತೆಯಲ್ಲ ಎಂಬುದನ್ನು ಅವರೆಲ್ಲರೂ ಅರಿಯಬೇಕು. 

ಹಾಗೆಂದು ಸಾರ್ವಜನಿಕ ಗ್ರಂಥಾಲಯಗಳನ್ನು ಸರ್ಕಾರವು ಚೆನ್ನಾಗಿ ನಡೆಸಿಕೊಂಡು ಬರುತ್ತಿದೆ  ಎನ್ನುವಂತೆಯೂ ಇಲ್ಲ. ಯಾಕೆಂದರೆ ಅದು ಒಳ್ಳೆಯ ಪುಸ್ತಕಗಳನ್ನು ತಡಮಾಡದೆ ಖರೀದಿಸಬೇಕು. ಆದರೆ ಇಲ್ಲಿಹಲವುಕಳಪೆ ಪುಸ್ತಕಗಳೂ ಗ್ರಂಥಾಲಯದ ಖರೀದಿಗೆ ಆಯ್ಕೆಯಾಗುತ್ತವೆ. ಗುಣಮಟ್ಟದ ಪುಸ್ತಕಗಳೇ ಇಲ್ಲದಿದ್ದರೆ ಗ್ರಂಥಾಲಯಗಳಿಗೆ ಓದುಗರು ಬರುವುದಾದರೂ ಹೇಗೆ?  

ಇನ್ನು ಖಾಸಗಿ ಗ್ರಂಥಾಲಯಗಳಲ್ಲಿಯೂ ಸಾವಿರಾರು ಪುಸ್ತಕಗಳು ಇರುತ್ತವೆ. ಬ್ರಿಟಿಶ್ ಲೈಬ್ರರಿ ಇಂಥ ಪ್ರಖ್ಯಾತ ಪುಸ್ತಕ ಭಂಡಾರಗಳಲ್ಲಿ ಒಂದು. ಬೆಂಗಳೂರಿನಲ್ಲಿರುವ ಇಂಗ್ಲೆಂಡ್ ಮೂಲದ ಈ ಗ್ರಂಥಾಲಯವು ಸಾವಿರಾರು ಪುಸ್ತಕಗಳು, ಕಾಂಪಾಕ್ಟ್ ಡಿಸ್ಕ್‌ಗಳು ಮುತಾದವುಗಳನ್ನು ಒಳಗೊಂಡಿದೆ. 

ಹಾಗೆಯೇ ರಾಜ್ಯದಲ್ಲಿ ನೂರಾರು ಸರ್ಕ್ಯುಲೇಟಿಂಗ್  ಲೈಬ್ರರಿಗಳಿವೆ. ಅಂದರೆ ಇಲ್ಲಿ ಕಾದಂಬರಿಗಳು ಹಾಗೂ ಮ್ಯಾಗಜಿನ್‌ಗಳೇ ಹೆಚ್ಚಾಗಿ ಸಿಗುತ್ತವೆ. ಇಲ್ಲಿ ದಿನಕ್ಕೆ ಇಂತಿಷ್ಟು ಎಂಬ ಶುಲ್ಕ ನೀಡಿ ಪುಸ್ತಕಗಳನ್ನು ಓದಬಹುದು. ಬಡಾವಣೆಗಳಲ್ಲಿ ಇಂಥ ಲೈಬ್ರರಿಗಳು ಸಾಮಾನ್ಯ. ಇಂಗ್ಲಿಶ್ ಕಾದಂಬರಿಗಳು, ಕನ್ನಡದ ಜನಪ್ರಿಯ ಕಾದಂಬರಿಗಳಿಗೆ ಇಲ್ಲಿ ಹೆಚ್ಚು ಓದುಗರು ಇರುತ್ತಾರೆ. ಮಕ್ಕಳ ಮ್ಯಾಗಜಿನ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ.

ಇನ್ನು ವಿದ್ಯಾರ್ಥಿ  ಪುಸ್ತಕ ಭಂಡಾರಗಳು ಸಾಮಾನ್ಯವಾಗಿಶೈಕ್ಷಣಿಕ ಸಂಸ್ಥೆಗಳಲ್ಲಿ ಇರುತ್ತವೆ. ಇವುಗಳಲ್ಲಿ ಪಠ್ಯಕ್ಮಕ್ಕೆ ಸಂಬಂಸಿದ ಸಾವಿರಾರು ಪುಸ್ತಕಗಳು ಇರುತ್ತವೆ. ಸೃಜನಶೀಲ ಕೃತಿಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ  ಇಲ್ಲ. ಯಾಕೆಂದರೆ ಒಂದೊಂದು ಪಠ್ಯಕ್ರಮದ ಮೇಲೂ ನೂರಾರು ಉನ್ನತ ಮಾಹಿತಿಯ ಪುಸ್ತಕಗಳನ್ನು ಖರೀದಿಸಬೇಕಾಗುತ್ತದೆ. ಇದಕ್ಕೆ ಹಣ ಬೇಕಲ್ಲವೆ? ಕಾಲೇಜುಗಳು ಮೊದಲು ಪಠ್ಯಕ್ರಮಕ್ಕೆ ಸಂಬಸಿದ ಪುಸ್ತಕಗಳಿಗೇ ಆದ್ಯತೆ ನೀಡುತ್ತವೆ. 

ಕಾಲೇಜು ಗ್ರಂಥಾಲಯಗಳು ಈಗ ಹೊಸ ರೂಪ ಪಡೆದಿವೆ. ಇಲ್ಲಿ ಓದುವ ವಾತಾವರಣ ಚೆನ್ನಾಗಿರುತ್ತದೆ. ಸಾರ್ವಜನಿಕ ಗ್ರಂಥಾಲಯಗಳಲ್ಲಿ, ಸರ್ಕ್ಯುಲೇಟಿಂಗ್ ಲೈಬ್ರರಿಗಳಲ್ಲಿ ಇರುವ ಬೋರು ಹುಟ್ಟಿಸುವ ಒಳಾಂಗಣಕ್ಕಿಂತ ಕಾಲೇಜು ಗ್ರಂಥಾಲಯಗಳು  ಉತ್ಸಾಹದಾಯಕವಾಗಿರುತ್ತವೆ. ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳಾದ ಭಾರತೀಯ ವಿeನ ಸಂಸ್ಥೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಕೃಷಿ ವಿಶ್ವವಿದ್ಯಾಲಯ ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ಪುಸ್ತಕ ಭಂಡಾರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. 

ಮನೆಮನೆಯಲ್ಲೂ ನೂರಾರು ಪುಸ್ತಕಗಳಾಗಿ ಅವರೇ ಮನೆಯ ಪುಸ್ತಕ ಭಂಡಾರವನ್ನು ಸ್ಥಾಪಿಸಿದ ಉದಾಹರಣೆಗಳನ್ನೂ ನಾವು ನೋಡಬಹುದು. 

ಒಟ್ಟಿನಲ್ಲಿ ನಮ್ಮ ಸಮಾಜಕ್ಕೆ ಗ್ರಂಥಾಲಯಗಳು ಎಷ್ಟಿದ್ದರೂ ಬೇಕು. ಪುಸ್ತಕ ಭಂಡಾರಗಳಿಂದಲೇ ಹೆಚ್ಚಿನ eನ ಪ್ರಸರಣವಾಗುತ್ತದೆ. ಪುಸ್ತಕಗಳು ಇರುವುದೇ  ಓದಲಿಕ್ಕೆ, ಹೊರತು ಕಪಾಟಿನಲ್ಲಿ ಭದ್ರವಾಗಿ ಇದ್ದು ಧೂಳು ತಿನ್ನುವುದಕ್ಕಲ್ಲ. ಆದ್ದರಿಂದ ನಾವೆಲ್ಲರೂ ಪುಸ್ತಕ ಭಂಡಾರದ ಸಂಸ್ಕೃತಿಯನ್ನು  ಬೆಳೆಸಲು ಶ್ರಮಿಸೋಣ. ಪುಸ್ತಕಗಳನ್ನು ಖರೀದಿಸೋಣ. ಓದೋಣ.

0 thoughts on “ಪುಸ್ತಕ ಭಂಡಾರಗಳು

  1. ನಮಸ್ಕಾರ, ನಿಮ್ಮ ಮಿತ್ರ ಮಾಧ್ಯಮ ಚೆನ್ನಾಗಿದೆ ಕೇಶವ ಪ್ರಸಾದ್ ಬಿ ಕಿದೂರು

Leave a Reply

Your email address will not be published. Required fields are marked *

12 − ten =

This site uses Akismet to reduce spam. Learn how your comment data is processed.