ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’

ಡಾಕ್ಯುಮೆಂಟರಿಗಳೆಂದರೆ ಒಂಥರ ಗೊಂದಲ ಹುಟ್ಟಿಸುತ್ತವೆ. ನೋಡಬೇಕೋ ಬೇಡವೋ ಎಂದು ನಿರ್ಧರಿಸುವಷ್ಟರಲ್ಲಿ ಆಸಕ್ತಿಯೇ ಹೊರಟು ಹೋಗಿರುತ್ತೆ. `ನಾಸ್ಟಾಲ್ಜಿಯಾ ಫಾರ್‌ ದ ಲೈಟ್‌’ ಎಂಬ ಡಾಕ್ಯುಮೆಂಟರಿಯನ್ನು ನೋಡುವ ಮೊದಲು ಆಗಿದ್ದೇ ಇದು! ಆದರೆ ನೋಡಿದ ಮೇಲೆ ಎಲ್ಲ ಗೊಂದಲಗಳೂ ಪರಿಹಾರವಾಗಿ ಇನ್ನುಮುಂದೆ ಫಿಕ್ಷನ್‌ ನೋಡೋದೇ ಬೇಡ ಅನ್ನೋ ಭಾವವೂ ಮೂಡಿಬಿಟ್ಟಿತ್ತು. ಕಾವ್ಯಾತ್ಮಕ, ಭಾವನಾತ್ಮಕ ಗುಣವುಳ್ಳವರು ಒಂದು ರಾತ್ರಿ ಏಕಾಂತದಲ್ಲಿ ಈ ಸಿನೆಮಾವನ್ನು ನೋಡಬೇಕು. ಆಮೇಲೆ ಖಂಡಿತ ನೀವು ಒಂದೆರಡು ದಿನ ಮಾತಾಡಲೂ ಹಿಂಜರಿಯುತ್ತೀರಿ. ನಾನೂ ಅದೇ ಬಗೆಯ ಮೌನಯುಗವನ್ನು ಅನುಭವಿಸಿ ಈಗಷ್ಟೇ ಬರೆಯುವ ಶಕ್ತಿ ಪಡೆದೆ.

"ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’"

ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?

೨೦ನೇ ಶತಮಾನದಲ್ಲಿ ಚೀನಾದಲ್ಲಿ ನಡೆದ ನರಮೇಧಗಳಿಗೆ ಲೆಕ್ಕವಿಲ್ಲ. ಚೀನಾದ ಕಮ್ಯುನಿಸ್ಟ್ ಚಳವಳಿಯ ಪರ ಮತ್ತು ವಿರೋಧಿಗಳ ಸಾವನ್ನಷ್ಟೇ ನಾನು ಹೇಳುತ್ತಿಲ್ಲ. ಜಪಾನ್ – ಚೀನಾ ಸಮರಗಳಲ್ಲೂ ಲಕ್ಷಗಟ್ಟಳೆ ಜನ ಸತ್ತರು. ಆ ಕಾಲದಲ್ಲಿ ಜಪಾನ್ ಪೂರ್ವಜಗತ್ತಿನ ಬಲಾಢ್ಯ ಮತ್ತು ಆಕ್ರಮಣಕಾರಿ ದೇಶವಾಗಿತ್ತು. ಚೀನಾವು ಕಮ್ಯುನಿಸ್ಟ್ ಆಡಳಿತಕ್ಕೆ ಸಿಕ್ಕಿದ ಮೇಲಂತೂ ನರಮೇಧಗಳು ತಣ್ಣಗೆ ನಡೆಯತೊಡಗಿದವು. ಈ ಮಧ್ಯೆ ದಕ್ಷಿಣ ಕೊರಿಯಾದ ಮೇಲೆ ಸಮರ ಸಾರಿದ ಉತ್ತರ ಕೊರಿಯಾಗೆ ತನ್ನ ಸೇನೆಯನ್ನು ಕಳಿಸಿದ ಚೀನಾವು ಸುಮಾರು ನಾಲ್ಕು ಲಕ್ಷ ಸೈನಿಕರನ್ನು ಕಳೆದುಕೊಂಡಿತು ಎನ್ನುವುದು ಇನ್ನೊಂದು ಭೀಕರ ಇತಿಹಾಸ. ಈ ಮಧ್ಯೆ ೧೯೩೭ರಲ್ಲಿ ಜಪಾನ್ ಸೇನೆಯು ಚೀನಾದ ನಾನ್‌ಜಿಂಗ್ ಪ್ರಾಂತವನ್ನು ಆಕ್ರಮಿಸಿ ನಡೆಸಿದ ನರಮೇಧ ಮನುಕುಲ ಕಂಡ ಅತಿ ಅಮಾನುಷ…

"ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?"

ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್

ಥ್ರಿಲ್ಲರ್‌ಗಳನ್ನು ನೋಡುವಾ ಅಂತ ಇತ್ತೀಚೆಗೆ ಹುಡುಕಿದಾಗ ಸಿಕ್ಕಿದ ‘ಟ್ರಾನ್ಸ್‌ಸೈಬೀರಿಯನ್’ ಎಂಬ ಸಿನೆಮಾ ನೋಡಿ ನಾನು ತತ್ತರಿಸಿದೆ. ಬ್ರಾಡ್ ಆಂಡರ್‌ಸನ್ ನಿರ್ದೇಶನದ ಈ ಸಿನೆಮಾ ಅಪ್ಪಟ ಶಾಸ್ತ್ರೀಯ ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್‌ಗಳ ಸಾಲಿಗೆ ಸೇರುತ್ತೆ. ಇನ್ನೇನು ಕೆಲವೇ ವಾರಗಳಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಪ್ರೇಮಿಗಳ ಮೇಲೆ ದಾಳಿ ಮಾಡಲಿರೋ ‘ವ್ಯಾನಿಶಿಂಗ್ ಆನ್ ದಿ ಸೆವೆನ್ಥ್ ಸ್ಟ್ರೀಟ್’ ಸಿನೆಮಾದ ನಿರ್ದೇಶಕನೂ ಆಗಿರುವ ಬ್ರಾಡ್ ಆಂಡರ್‌ಸನ್ ಬಹುಶಃ ಈ ಕಾಲದ ಅತ್ಯುತ್ತಮ ಥ್ರಿಲ್ಲರ್ ಸಿನೆಮಾ ನಿರೂಪಕ. ಬರೀ ‘ಟ್ರಾನ್ಸ್‌ಸೈಬೀರಿಯನ್’ (೨೦೦೮) ನೋಡಿ ಈ ಮಾತು ಹೇಳುತ್ತಿಲ್ಲ. ‘ಸೆಶನ್ ೯’ ಮತ್ತು ‘ದಿ ಮೆಶಿನಿಸ್ಟ್’ ಎಂಬ ಈತನ ಇನ್ನೆರಡು  ಸಿನೆಮಾಗಳನ್ನೂ ನೋಡಿ ಸುಸ್ತಾಗಿ ಹೀಗೆ ಬರೆಯುತ್ತಿರುವೆ.

"ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್"

ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ

(ವಿಜಯ ಕರ್ನಾಟಕದಲ್ಲಿ ೧೯.೮.೨೦೧೦ರಂದು ಪ್ರಕಟಿತ) ಜುಲೈ ೨೬ರಂದು ಶ್ರೀ ವಿನಾಯಕ ಕೋಡ್ಸರರವರು ‘ಕವಲು’ ಕಾದಂಬರಿಯ ಬಗ್ಗೆ ಬರೆದ ಲೇಖನಕ್ಕೆ ನಾನು ಕಳಿಸಿದ ಪ್ರತಿಕ್ರಿಯೆಯನ್ನು ಪ್ರಕಟಿಸುವ ಬದಲು, ನಾನು ಉಲ್ಲೇಖವಾಗಿ ಕಳಿಸಿಕೊಟ್ಟ ‘ಕವಲು’ ಕುರಿತು ನಾನು ನನ್ನ ವೆಬ್‌ಸೈಟಿನಲ್ಲಿ ಬರೆದ ವಿಮರ್ಶೆಯನ್ನು – ಭೈರಪ್ಪನವರ ಒಳ್ಳೆಯ ಕಾದಂಬರಿಗಳ ಬಗ್ಗೆ ಉಲ್ಲೇಖಿಸಿದ ಸಾಲುಗಳನ್ನು ಕಡಿತಗೊಳಿಸಿ – ಜುಲೈ ೨೯ರಂದು ಪ್ರಕಟಿಸಿದ್ದೀರಿ; ಮರುದಿನವೇ  ನನ್ನ ವೆಬ್‌ಸೈಟನ್ನು ಜಾಲಾಡಿ ನನ್ನ ಆತ್ಮರತಿಯ ಕೃತ್ಯಗಳನ್ನೆಲ್ಲ ಸಂಶೋಧಿಸಿ ಡಾ. ಅರ್ಪಿತಾ ಬಾಳೆನ್ ಬರೆದ ಪ್ರತಿಕ್ರಿಯೆಯನ್ನೂ ಪ್ರಕಟಿಸಿದ್ದೀರಿ.

"ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ"

ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು

‘ಕವಲು’ ಕಾದಂಬರಿ ಬಿಡುಗಡೆಯಾಗಿ ಒಂದೇ ವಾರದಲ್ಲಿ ಮೂರು ಮರುಮುದ್ರಣಗಳನ್ನು ಕಂಡಿದೆ. ಹಾಗಾದರೆ ಅದು ಕಾದಂಬರಿಯ ಯಶಸ್ಸು ಅಲ್ಲವೆ? ಇಷ್ಟಾಗಿಯೂ ಭೈರಪ್ಪನವರು ತಮ್ಮ ಕಾದಂಬರಿಗಳ ಮೇಲೆ `ಸರಿಯಾದ’ ವಿಮರ್ಶೆ ಆಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುವುದೇಕೆ? ಕಾದಂಬರಿಯ ಯಶಸ್ಸಿನ ಮಾನದಂಡ ಯಾವುದು? ಅದರ ಮಾರಾಟವೋ, ಓದುಗರಲ್ಲಿ ಕಾದಂಬರಿಯನ್ನು ಓದಿದ ಮೇಲೆ ಮನಸ್ಸಿನಲ್ಲಿ ನಿಲ್ಲುವ ಭಾವುಕ ಕ್ಷಣಗಳೋ, ವಿಮರ್ಶಕರು ಅಳೆದು ತೂಗಿ ಬರೆದ ಮೌಲ್ಯಮಾಪನದ ಮಾತುಗಳೋ?

"ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು"

ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…

ಎರಡನೇ ಮಹಾಯುದ್ಧ ಯಾರಿಗೆ ಗೊತ್ತಿಲ್ಲ? ಹಿಟ್ಲರ್‌ನ ಶತ್ರು – ಮಿತ್ರ ದೇಶಗಳ ನಡುವೆ ಆರೇಳು ವರ್ಷ ನಡೆದ ಈ ಯುದ್ಧದಲ್ಲಿ ಸತ್ತವರೆಷ್ಟು ಎಂಬುದೆಲ್ಲ ಈಗ ಇತಿಹಾಸ. ಜರ್ಮನಿಯ ನಾಝಿಗಳು ಸ್ಥಾಪಿಸಿದ್ದ ಯಾತನಾಶಿಬಿರಗಳನ್ನು ಯಾರು ತಾನೇ ಮರೆಯಲು ಸಾಧ್ಯ? ೧೯೯೩ರಲ್ಲಿ ಬಂದ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ಶಿಂಡ್ಲರ್ಸ್ ಲಿಸ್ಟ್ ಸಿನೆಮಾದಿಂದ ಹಿಡಿದು, ಕಳೆದ ವರ್ಷ ಬಂದ ದಿ ಇನ್‌ಗ್ಲೋರಿಯಸ್ ಬಾಸ್ಟರ್ಡ್ಸ್ ವರೆಗೆ ಹೊಸ ಸಿನೆಮಾಗಳೇ ಸಾಕಷ್ಟು ಬಂದಿವೆ. ವಾರ್ ಮೂವೀ ಅನ್ನೋದು ಹಾಲಿವುಡ್ ಜಗತ್ತಿನ ಒಂದು ಅತ್ಯಾಕರ್ಷಕ ಕಲ್ಟ್. ಯುದ್ಧದಲ್ಲಿ ಏನು ನಡೆಯಿತು, ಅದರಿಂದ ಮನುಕುಲ ಕಲಿಯಬೇಕಾದ ಪಾಠವೇನು… ಹೀಗೆ ನೂರಾರು ಸಿನೆಮಾಗಳು ಬಂದಿವೆ. ಸಾಮಾನ್ಯವಾಗಿ ಜರ್ಮನಿ, ಅಮೆರಿಕಾ, ಯೂರೋಪ್ ದೇಶಗಳು, ಇಂಗ್ಲೆಂಡ್ – ಇವುಗಳೇ ಈ…

"ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…"

ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ

ವಸುಂಧರೆಯ ಮಹಾನ್ ಜ್ಞಾನಿ ಇನ್ನಿಲ್ಲ. ಆಲ್ಬರ್ಟ್ ಐನ್‌ಸ್ಟೈನ್‌ನಷ್ಟೇ ಬುದ್ಧಿಮತ್ತೆ, ಮನುಕುಲದ ಬಗ್ಗೆ ಉದಾತ್ತ ನೋಟ, ಕಂಡರಿಯದ ಮುಗ್ಧತೆ, – ಎಲ್ಲ ಹೊಂದಿದ್ದ ಕಿಮ್ ಪೀಕ್ ಎಂಬ ಅಪೂರ್ವ ಚೇತನ ನಮ್ಮಿಂದ ದೂರವಾಗಿದೆ. ‘ವಿಭಿನ್ನವಾಗಿರಲು ನೀವು ಅಂಗವಿಕಲರೇ ಆಗಬೇಕಿಲ್ಲ; ಪ್ರತಿಯೊಬ್ಬರೂ ವಿಭಿನ್ನರೇ’ ಎಂದು ಪದೇ ಪದೇ ಹೇಳುತ್ತ ಬಂದಿದ್ದ ವಿಶ್ವದ ಸರ್ವಕಾಲೀನ ಸವಂತ್ (ದಿವ್ಯಜ್ಞಾನಿ ಅನ್ನಿ) ಕಿಮ್ ಪೀಕ್ ಡಿಸೆಂಬರ್ ೧೯ರಂದು ಹೃದಯಾಘಾತದಿಂದ ತೀರಿಕೊಂಡ.

"ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ"

ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ

ಜೇಮ್ಸ್ ಕ್ಯಾಮೆರಾನ್ ಸಿನೆಮಾ ಅಂದಮೇಲೆ ನೀವು ಥಿಯೇಟರಿಗೆ ಹೋಗಲೇಬೇಕು. ಅಲ್ಲಿ ಒಂದೂ ದೃಶ್ಯವನ್ನೂ ಬಿಡದೆ ನೋಡಲೇಬೇಕು. ಸಿನೆಮಾದೆಲ್ಲ ಸಂಭಾಷಣೆಗಳನ್ನೂ ಕಿವಿಯಿಟ್ಟು ಕೇಳಿ ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೃಶ್ಯ, ಸನ್ನಿವೇಶ ಅರ್ಥವಾಗಲಿಲ್ಲ ಎಂದರೆ ಮತ್ತೆ ಥಿಯೇಟರಿಗೆ ಹೋಗಿ….

"ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ"

‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ

ಕ್ರೈಸ್ತ ಮತಪ್ರಚಾರ, ಸಾಮ್ರಾಜ್ಯಶಾಹಿ ಆಳ್ವಿಕೆ, ಗುಲಾಮಗಿರಿ, ಸಂಪತ್ತಿನ ಲೂಟಿ, ನರಮೇಧ – ಇವೆಲ್ಲವೂ ೧೫ನೇ ಶತಮಾನದಿಂದ ಇಂದಿನವರೆಗೂ ಏಶ್ಯಾ, ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ ಖಂಡಗಳನ್ನು ವ್ಯಾಪಿಸಿವೆ. ಇಂದು ಮಾನವಹಕ್ಕುಗಳ ಬಗ್ಗೆ ವಿಪರೀತ ಮಾತಾಡುತ್ತಿರುವ, ಶಾಂತಿಮಂತ್ರವನ್ನು ಬೋಧಿಸುತ್ತಿರುವ ಐರೋಪ್ಯ ದೇಶಗಳೇ ಈ ಎಲ್ಲ ಅಪಚಾರಗಳಿಗೆ ಹೊಣೆಯಾಗಿವೆ ಎಂಬುದನ್ನು ಮರೆಯಲಾದೀತೆ? ಕಳೆದ ವಾರ ಓಮರ್ ಮುಖ್ತರ್ ಬಗ್ಗೆ ಬರೆದಾಗ ಇಟಲಿಯ ನರಮೇಧವನ್ನು ತಿಳಿದುಕೊಂಡೆವು. ಈ ಸಲ ‘ದಿ ಮಿಶನ್’ ಎಂಬ ಇನ್ನೊಂದು ಸಿನೆಮಾದ ಮೂಲಕ ದಕ್ಷಿಣ ಅಮೆರಿಕಾದಲ್ಲಿ ನಡೆದಿದ್ದ ಭೀಕರ ನರಮೇಧಗಳ, ವಿಲಕ್ಷಣ ಸಂಘರ್ಷಗಳ ಇತಿಹಾಸವನ್ನು ತಿಳಿದುಕೊಳ್ಳೋಣ!

"‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ"

ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !

ಜೆಹಾದಿ (ಇಸ್ಲಾಮಿಕ್ ಧರ್ಮಯುದ್ಧ ಎಂದುಕೊಳ್ಳುವಾ) ಅಂದಕೂಡಲೇ ಹಲವರ ಮನಸ್ಸಿನಲ್ಲಿ ಎಂಥದೋ ವಿಕ್ಷಿಪ್ತ ಭಾವ ಮೂಡುತ್ತೆ. ಸಹಜವೇ. ಇವತ್ತು ಜೆಹಾದಿ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ತಾಲಿಬಾನ್, ಅಲ್ ಖೈದಾಗಳ ಉಗ್ರಗಾಮಿ ಕೃತ್ಯಗಳು ನಮ್ಮನ್ನು ಧೃತಿಗೆಡಿಸಿವೆ.

"ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !"