ಸಾಮರಸ್ಯದ ನೇಕಾರ : ಸಂತ ಕಬೀರ

`ಕೇವಲ ಅಬ್ರಾಹ್ಮಣರು ಮುಟ್ಟಿದಾಗ ಮಾತ್ರವೇ ಈ ನೀರು ಕಲುಷಿತವಾಗುವುದು ಹೇಗೆ?  ನೀರು ಕುಡಿಯಬೇಕಾದರೆ ನಿನಗೆ ನೀರಿನೊಳಗೆ ಇರುವುದೇನು ಎಂದು ಗೊತ್ತಿರಬೇಕು.  ಮಹಾಭಾರತ ಯುದ್ಧದಲ್ಲಿ ೫೬ ಕೋಟಿ ಯಾದವರು ಮತ್ತು ೮೮ ಸಾವಿರ ಇತರರು ಸತ್ತರು ಎಂದು ನಿಮ್ಮ  ಪವಿತ್ರಗ್ರಂಥಗಳು ಹೇಳುತ್ತವೆ. ಅವರ ಮಾಂಸ, ರಕ್ತ, ಮಜ್ಜೆಗಳೆಲ್ಲ ಈ ನೀರಿನಲ್ಲಿ ಬೆರೆತಿವೆ.  ಈ ನೆಲದಲ್ಲಿ ಪ್ರತಿಯೊಂದು ಅಂಗುಲದಲ್ಲೂ ಮೃತದೇಹಗಳನ್ನು ಹೂಳಲಾಗಿದೆ. ಅವುಗಳೆಲ್ಲ ಕೊಳೆತು ನೀರಿನಲ್ಲಿ ಬೆರೆತಿವೆ. ಲಕ್ಷಗಟ್ಟಳೆ ಆಮೆಗಳು, ಮೊಸಳೆಗಳು, ಕಪ್ಪೆಗಳು, ಮೀನುಗಳು ಈ ನೀರಿನಲ್ಲೇ ಬದುಕುತ್ತವೆ ; ಸಂತಾನಕ್ರಿಯೆ ನಡೆಸುತ್ತವೆ. ಈ ಎಲ್ಲ ಪ್ರಾಣಿಗಳು ಸತ್ತು ಅವುಗಳ ದೇಹಗಳು ಈ ನೀರಿನಲ್ಲಿ ಬೆರೆತಿವೆ. ನೀನು ಕುಟಿಯುತ್ತಿರುವ ನೀರು ಇಷ್ಟೆಲ್ಲ ಕಲುಷಿತವಾಗಿದೆ. ನೀರಿನ ಮೇಲೆ, ನೆಲದ ಮೇಲೆ…

"ಸಾಮರಸ್ಯದ ನೇಕಾರ : ಸಂತ ಕಬೀರ"

ಕಲಿವ ತವಕ

ನಮ್ಮ ಬದುಕು ಸಂಕೀರ್ಣವಾಗಿದೆ, ಎಲ್ಲೆಡೆ ಮಾಹಿತಿಸ್ಫೋಟವಾಗಿದೆ, ಜಗತ್ತು ಬಹುಬೇಗ  ಬದಲಾಗುತ್ತಿದೆ. ಉದ್ಯಮಗಳು ಶರವೇಗದಲ್ಲಿ ಬೆಳೆಯುತ್ತಿವೆ; ಬದಲಾಗುತ್ತಿವೆ. ವಸುಧೆಯೇ ಒಂದು ಕುಟುಂಬ ಎಂದು ನಮ್ಮ ಹಿರಿಯರು ಹೇಳಿದ ಮಾತು ನಿಜವಾಗುತ್ತಿದೆ. ವಿಶ್ವವೇ ಗ್ರಾಮವಾಗಿದೆ. ಸಮಾಜದಲ್ಲಿ ಸಂಸ್ಕೃತಿ, ಪರಂಪರೆಯ ಪರಿಕಲ್ಪನೆಗಳೇ ಚಹರೆ ಬದಲಿಸಿಕೊಂಡಿವೆ.

"ಕಲಿವ ತವಕ"