ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ

ಬದುಕನ್ನು ಬಂದ ಹಾಗೆ ಸ್ವೀಕರಿಸುವುದು, ಸ್ವೀಕರಿಸಿದ್ದನ್ನು ಸಿಂಗರಿಸುವುದು, ನಾವೂ ಆನಂದಿಸುವುದು, ಇನ್ನೊಬ್ಬರಿಗೂ ಆನಂದ ಕೊಡಲು ಮನಸಾರೆ ಯತ್ನಿಸುವುದು, ಸುತ್ತಮುತ್ತ ಇರುವ ಸಹೃದಯ ಜೀವಗಳನ್ನು ಗೌರವಿಸುವುದು…. ಒಪ್ಪಿಕೊಂಡಿರುವ ಸತ್ಯ ಬದಲಾದಾಗ ಬದಲಾವಣೆಯನ್ನೂ ಪ್ರಾಂಜಲವಾಗಿ ಒಪ್ಪಿಕೊಳ್ಳುವುದು – ಇವೆಲ್ಲ ಮನುಕುಲವೆಂಬ ಬಳಗದ ಎಲ್ಲ ಸದಸ್ಯರಲ್ಲಿ ಇರಬೇಕಾದ ಗುಣಗಳು. ಈ ಗುಣಗಳು ಇರಬೇಕೆಂದು ಹೇಳುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ!

"ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ"

ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !

ವಾಲ್ಟ್ ಕೋವಾಲ್‌ಸ್ಕಿ ಒಬ್ಬ ಜನಾಂಗೀಯವಾದಿ. ಕೊರಿಯಾದಲ್ಲಿ ಯುದ್ಧ ಮಾಡಿ ಬಂದು ಅಮೆರಿಕಾದಲ್ಲಿ ಫೋರ್ಡ್ ಮೋಟಾರ್ ಸಂಸ್ಥೆಯಲ್ಲಿ ೫೦ ವರ್ಷ ಕೆಲಸ ಮಾಡಿದವನು. ಈಗ ಉದ್ಯಮವೆಲ್ಲ ಸತ್ತಿರುವ ಡೆಟ್ರಾಯಿಟ್ ನಗರದಲ್ಲಿ ವಾಸಿದ್ದಾನೆ. ಅವನ ಹೆಂಡತಿ ಇತ್ತೀಚೆಗಷ್ಟೆ ತೀರಿಕೊಂಡಿದ್ದಾಳೆ. ತನ್ನ ಇಬ್ಬರೂ ಗಂಡುಮಕ್ಕಳನ್ನು ಅವನೇ ದೂರ ಇಟ್ಟಿದ್ದಾನೆ. ಆಗಾಗ ಬರುವ ಮೊಮ್ಮಕ್ಕಳು ಅವನಿಗೆ ಹೊಂದಿಕೆಯಾಗುವುದಿಲ್ಲ. ಅವನ ಗೆಳೆಯರೆಲ್ಲ ಬಹುತೇಕ ಸತ್ತೇಹೋಗಿದ್ದಾರೆ. ೭೮ರ ಹರೆಯದ ವಾಲ್ಟ್ ಕೋವಾಲ್‌ಸ್ಕಿಗೆ ನಾಯಿಯೊಂದೇ ಸಂಗಾತಿ. ಅಕ್ಕಪಕ್ಕದಲ್ಲಿ ಮೊನ್ ಸಮುದಾಯದ ಜನರ ಮನೆಗಳು. ಲಾವೋಸ್‌ನಿಂದ ದೇಶಭ್ರಷ್ಟರಾಗಿ ಬಂದವರು. ಅವರ ದಿನಚರಿ, ಬದುಕಿನ ಶೈಲಿಯನ್ನು ಕಂಡರೆ ವಾಲ್ಟ್ ಕೋವಾಲ್‌ಸ್ಕಿಗೆ ಆಗೋದಿಲ್ಲ. ಅವನಿಗೆ ತುಂಬಾ ಕ್ರೇಜ್ ಅಂದ್ರೆ ೧೯೭೨ರ ಮಾಡೆಲ್‌ನ ಗ್ರಾನ್ ಟೊರಿನೋ ಕಾರು. ಅದರ ಸುದ್ದಿಗೆ ಯಾರೂ…

"ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !"

ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !

ಜೇಮ್ಸ್ ಗಲಿಯೆನ್ ಆ ಪ್ರಯಾಣಿಕನನ್ನು ಕಂಡಿದ್ದೇ ಫೇರ್‌ಬ್ಯಾಂಕ್ಸ್‌ನಿಂದ ಐದು ಮೈಲು ದೂರ ಸಾಗಿದ ಮೇಲೆ. ಅಲಾಸ್ಕಾದ ಆ ಮುಂಜಾನೆಯಲ್ಲಿ ನಖಶಿಖಾಂತ ನಡುಗುತ್ತ, ಹೆಬ್ಬೆಟ್ಟು ತೋರುತ್ತ ನಿಂತ ಯುವಕನ ಬೆನ್ನೇರಿದ ಚೀಲದಿಂದ ಬಂದೂಕೊಂದು ಇಣುಕುತ್ತಿತ್ತು. `ನಾನು ಅಲೆಕ್ಸ್’ ಎಂದಷ್ಟೆ ಪರಿಚಯಿಸಿಕೊಂಡ ಆತ ಡೆನಾಲಿ ರಾಷ್ಟ್ರೀಯ ಪಾರ್ಕಿನ ತುತ್ತತುದಿಗೆ ಹೋಗಿ ಕೆಲವು ತಿಂಗಳುಗಳ ಕಾಲ ಇರಬೇಕಿದೆ ಎಂದ. ಅವನ ಚೀಲವೋ ೨೫ & ೩೦ ಪೌಂಡ್ ತೂಗುತ್ತಿದೆಯಲ್ಲ ಎಂದು ಜೇಮ್ಸ್ ಅಚ್ಚರಿಪಟ್ಟ. ಇಂಥ ಥಂಡಿಯಲ್ಲಿ ಈ ಅಲೆಕ್ಸ್ ಬದುಕುವುದು ಹೇಗೆ ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತ್ತು.

"ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !"

ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ

ಹಾಲಿವುಡ್ ಸಿನೆಮಾ ನೋಡುವ ವಿಪರೀತ ಚಟದಲ್ಲಿ ಯಾವ ಸಿನೆಮಾ ಬಂದರೂ ನೋಡುತ್ತಿದ್ದ ೮೦ರ ದಶಕದಲ್ಲಿ ನನ್ನನ್ನು ತೀವ್ರವಾಗಿ ಕಲಕಿದ ಸಿನೆಮಾ `ದಿ ಕಿಲ್ಲಿಂಗ್ ಫೀಲ್ಡ್ಸ್’. ಮೂರು ಆಸ್ಕರ್ ಪ್ರಶಸ್ತಿಗಳನ್ನು ದಕ್ಕಿಸಿಕೊಂಡ ಈ ಸಿನೆಮಾ ಯುದ್ಧ, ಕ್ರಾಂತಿ, ದೇಶಗಳ ನಡುವಣ ಸಂಘರ್ಷ, ಮಾನವತೆ, ಸ್ನೇಹ, ಹಿಂಸೆ – ಎಲ್ಲವನ್ನೂ ಎಲ್ಲ ಫ್ರೇಮುಗಳಲ್ಲಿ ತೋರಿಸುತ್ತ ಎದೆ ಕದಡುತ್ತದೆ. ಅದ್ಭುತ ಸೆಟಿಂಗ್‌ಗಳು, ಮಹಾನ್ ನಟನೆ, ಕ್ಷಣಕ್ಷಣಕ್ಕೂ ಏನಾಗುತ್ತದೆ ಎಂಬ ಕುತೂಹಲವನ್ನು ಕೆರಳಿಸುವ ಕಥಾ ಹಂದರ, – ಈ ಸಿನೆಮಾದಲ್ಲಿ ಏನಿದೆ, ಏನಿಲ್ಲ…….

"ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ"

ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ

ಅನ್ಯಗ್ರಹಜೀವಿಗಳ ಬಗ್ಗೆ ನೀವು ಎಷ್ಟೇ ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳನ್ನು ನೋಡಿರಬಹುದು. ಎಷ್ಟೆಲ್ಲ ಸ್ಪೆಶಿಯಲ್ ಎಫೆಕ್ಟ್‌ಗಳನ್ನು ಅನುಭವಿಸಿ ರೋಮಾಂಚಿತರಾಗಿರಬಹುದು. ಡಿಸ್ಟ್ರಿಕ್ಟ್ ೯ ಸಿನೆಮಾವನ್ನೂ ಅದೇ ಪಟ್ಟಿಗೆ ಸೇರಿಸೋದು ಅಸಾಧ್ಯ. ಇದೂ ಅನ್ಯಗ್ರಹ ಜೀವಿಗಳನ್ನು ಕುರಿತೇ ಇದೆ; ಇಲ್ಲೂ ಹತ್ತಾರು / ನೂರಾರು ಸ್ಪೆಶಿಯಲ್ ಎಫೆಕ್ಟ್‌ಗಳಿವೆ. ಇಲ್ಲೂ ‘ಇಂಡಿಪೆಂಡೆನ್ಸ್ ಡೇ’ ಸಿನೆಮಾದಲ್ಲಿ ಕಾಣುವಂಥ ಬೃಹತ್ ಅನ್ಯಗ್ರಹ ನೌಕೆಯಿದೆ. ಸಿಗಡಿ ಮೀನಿನ ದೇಹವುಳ್ಳ ಅನ್ಯಗ್ರಹಜೀವಿಗಳ ವಸಾಹತೇ ಇಲ್ಲಿದೆ.

"ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ"

ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ

1991 ರಲ್ಲಿ ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಸಿನೆಮಾ ಬಂದಾಗ ಆಂಥೋನಿ ಹಾಪ್‌ಕಿನ್ಸ್ ಇದಾನಂತೆ, ಅವನಿಗೆ ಆಸ್ಕರ್ ಸಿಕ್ಕಿತಂತೆ ಎಂಬ ಸುದ್ದಿಯ ಬೆನ್ನುಬಿದ್ದು ಸಿನೆಮಾ ನೋಡಿದೆ. ಆಗಿನ ಕಾಲದಲ್ಲಿ ಆಸ್ಕರ್ ಬಂದ ಎಷ್ಟೋ ತಿಂಗಳುಗಳ ನಂತರ ಆ ಸಿನೆಮಾ ಬೆಂಗಳೂರಿಗೆ ಬರುತ್ತಿತ್ತು. ಈಗ ಹಾಲಿವುಡ್ ಸಿನೆಮಾಗಳು ಸರಸರ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ ಬರುತ್ತದೆ. ಸ್ಯಾಟೆಲೈಟ್ ಡಿಜಿಟಲ್ ಪ್ರಾಜೆಕ್ಷನ್ ತಂತ್ರಜ್ಞಾನದಿಂದ ಇದೆಲ್ಲ ಸಾಧ್ಯವಾಗಿದೆ ಅನ್ನಿ.

"ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ"

A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ

ಎ ಬ್ಯೂಟಿಫುಲ್ ಮೈಂಡ್ ಆಸ್ಕರ್ ಪ್ರಶಸ್ತಿ ಪಡೆದಿದೆ ಎನ್ನುವುದಕ್ಕಿಂತಲೂ ಒಬ್ಬ ಶ್ರೇಷ್ಠ ಗಣಿತಜ್ಞನ ಜೀವನಕಥೆ ಆಧರಿಸಿ ತೆಗೆದ ಸಿನಿಮಾ ಎಂಬುದೇ ಬಹಳಷ್ಟುಆಕರ್ಷಣೆಗೊಳಗಾಗಿತ್ತು. ಆದರೆ ಒಂದು ನಿಜವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವಾಗ ಪಡೆಯುವ ರೂಪ, ಕೈ ಬಿಟ್ಟು ಹೋಗಬಹುದಾದ ಸೂಕ್ಷ್ಮ ಸಂಗತಿ…ಇತ್ಯಾದಿ..ಅಂದರೆ ಅಡಾಪ್ಟೇಷನ್ ಸಂದರ್ಭದಲ್ಲಿ ಹೇಗೆ ಎಂಬುದನ್ನು  ಕಾದಂಬರಿ, ಡಾಕ್ಯುಮೆಂಟರಿ ಹಾಗೂ ಸಿನಿಮಾ ನೋಡಿ ವಿಶ್ಲೇಷಿಸಿದೆ.

"A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ"

ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !

ಒಂದು ಮಾತು ಹೇಳ್ತೇನೆ: ಬೆಂಗಳೂರಿನಲ್ಲಿ ಹುಟ್ಟಿ, ಕೋಲ್ಕೊತಾದಲ್ಲಿ ಓದಿ ಮೆರೈನ್ ಇಂಜಿನಿಯರ್ ಆಗಿದ್ದ ಜಾರ್ಜ್ ಫಿಲಿಪೋಸ್ ಬರೆದ ‘ದಿ ಮೆನ್ ಇನ್‌ಸೈಡ್’ ಪುಸ್ತಕ ನಿಜಕ್ಕೂ ಅನ್‌ಪುಟ್‌ಡೌನಬಲ್. ಯಾವುದೋ ಖಿನ್ನತೆಯ ಕಷಣದಲ್ಲಿ ಜಯನಗರದ ಪುಸ್ತಕದಂಗಡಿ ಹೊಕ್ಕಾಗ ಕಂಡ ಈ ಪುಸ್ತಕವನ್ನು ಕುತೂಹಲದಿಂದ ಖರೀದಿಸಿ ಓದಿದೆ. ಅರೆ, ಖಿನ್ನತೆಯೂ ಇಂಥ ಅದೃಷ್ಟಕ್ಕೆ ಕಾರಣವಾಯಿತಲ್ಲ ಎಂದು ಖುಷಿಯಾಗುತ್ತಿದೆ!

"ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !"